1 Chronicles 7:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆದೀಯಯೇಲನ ಎಲ್ಲಾ ಗಂಡುಮಕ್ಕಳು ತಮ್ಮ ಗೋತ್ರಗಳಿಗೆ ಪ್ರಧಾನರಾಗಿದ್ದರು. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಹದಿನೇಳು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಗೋತ್ರ ಪ್ರಧಾನರಿಗೆ ಸೇರಿದವರೆಲ್ಲರೂ ಯೆದೀಯಯೇಲನ ಸಂತಾನದವರು. ಇವರಲ್ಲಿ ಹದಿನೇಳು ಸಾವಿರದ ಇನ್ನೂರು ಯುದ್ಧದಲ್ಲಿ ಹೋರಾಡತಕ್ಕ ಪರಾಕ್ರಮ ಶಾಲಿಗಳು.
Kannada BSI Bible 2016
ಇವರೆ ಲ್ಲರು ಯೆದೀಯಯೇಲನ ಕುಮಾರರು. ಅವರು ತಮ್ಮ ಪಿತೃಗಳಲ್ಲಿ ಯಜಮಾನರಾಗಿಯೂ ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡ ತಕ್ಕವರು ಹದಿನೇಳು ಸಾವಿರದ ಇನ್ನೂರು ಮಂದಿ ಯಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಗೋತ್ರಪ್ರಧಾನರಿಗೆ ಸೇರಿದವರೆಲ್ಲರೂ ಯೆದೀಯಯೇಲನ ಸಂತಾನದವರು. ಇವರಲ್ಲಿ ಯುದ್ಧಕ್ಕೆ ಹೋಗತಕ್ಕ ಭಟರು ಹದಿನೇಳು ಸಾವಿರದ ಇನ್ನೂರು ಮಂದಿ.
Kannada Bible (KNCL) BSI 2016
ಅವರೆಲ್ಲರೂ ತಮ್ಮ ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ಧ ಯುದ್ಧವೀರರೂ ಆಗಿದ್ದರು. ಅವರ ವಂಶಜರಲ್ಲಿ 17,200 ಜನರು ಸೈನ್ಯದಲ್ಲಿರಲು ಅರ್ಹತೆ ಪಡೆದಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರೆಲ್ಲರು ಯೆದೀಯಯೇಲನ ಪುತ್ರರು. ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡತಕ್ಕವರು 17,200 ಮಂದಿಯಾಗಿದ್ದರು.