1 Chronicles 7:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮನಸ್ಸೆಯ ಸಂತತಿಯವರು ಯಾರೆಂದರೆ: ಮನಸ್ಸೆ ಮತ್ತು ಅವನ ಅರಾಮ್ಯದ ದಾಸಿಯಲ್ಲಿ ಹುಟ್ಟಿದ ಮಗ ಅಷ್ರೀಯೇಲ್; ಅವರಿಗೆ ಮಾಕೀರ್ ಎಂಬ ಇನ್ನೊಬ್ಬ ಮಗನಿದ್ದನು. ಇವನು ಗಿಲ್ಯಾದನ ತಂದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮನಸ್ಸೆಯ ಸಂತಾನದವರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಷ್ರೀಯೇಲ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ.
Kannada BSI Bible 2016
ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮನಸ್ಸೆಯ ಸಂತಾನದವರು - ಮನಸ್ಸೆಯ ಅರಾಮ್ಯಳಾದ ಉಪಪತ್ನಿಯು ಅವನಿಗೆ ಅಷ್ರೀಯೇಲನನ್ನೂ ಮಾಕೀರನನ್ನೂ ಹೆತ್ತಳು; ಮಾಕೀರನು ಗಿಲ್ಯಾದನ ತಂದೆ.
Kannada Bible (KNCL) BSI 2016
ಅರಾಮ್ಯ ಉಪಪತ್ನಿಯಿಂದ ಮನಸ್ಸೆಗೆ ಅಷ್ರಿಯೇಲ್, ಮಾಕೀರ ಎಂಬಿಬ್ಬರು ಮಕ್ಕಳಿದ್ದರು. ಮಾಕೀರ ಗಿಲ್ಯಾದನ ತಂದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮನಸ್ಸೆಯ ವಂಶಜರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಸ್ರೀಯೇಲ್ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ.