1 Chronicles 7:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮಾಕೀರನ ಹೆಂಡತಿಯಾದ ಮಾಕಳು ಒಂದು ಗಂಡುಮಗುವನ್ನು ಹೆತ್ತು ಅವನಿಗೆ ಪೆರೆಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಇವನ ಗಂಡುಮಕ್ಕಳು ಯಾರೆಂದರೆ: ಊಲಾಮ್ ಮತ್ತು ರೆಕೆಮ್.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಅವನಿಗೆ ಪೆರೇಷ್ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಷ್. ಶೆರೆಷನ ಮಕ್ಕಳು ಊಲಾಮ್ ಮತ್ತು ರೆಕೆಮ್.
Kannada BSI Bible 2016
ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಪೆರೆಷೆಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್‌; ಇವನಿಗೆ ಊಲಾಮನು, ರೆಕೆಮನು ಎಂಬ ಹೆಸರುಳ್ಳ ಕುಮಾರ ರಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಅವನಿಗೆ ಪೆರೆಷೆಂದು ಹೆಸರಿಟ್ಟಳು; ಇವನ ತಮ್ಮನ ಹೆಸರು ಶೆರೆಷ್. ಶೆರೆಷನ ಮಕ್ಕಳು - ಊಲಾಮ್, ರೆಕೆಮ್ ಎಂಬವರು.
Kannada Bible (KNCL) BSI 2016
ಮಾಕೀರನ ಹೆಂಡತಿ ಮಾಕ ಇಬ್ಬರು ಮಕ್ಕಳಿಗೆ ಜನ್ಮವಿತ್ತಳು. ಅವರಿಗೆ ಪೆರೆಷ್ ಮತ್ತು ಶೆರೆಷ್ ಎಂದು ಹೆಸರಿಟ್ಟನು. ಪೆರೆಷನಿಗೆ ಊಲಾಮ್, ರೆಕೆಮ್ ಎಂಬಿಬ್ಬರು ಮಕ್ಕಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಪೆರೆಷ್ ಎಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್. ಇವನಿಗೆ ಊಲಾಮ್, ರೆಕೆಮ್ ಎಂಬ ಇಬ್ಬರು ಪುತ್ರರಿದ್ದರು.