1 Chronicles 7:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮನಸ್ಸೆಯ ಗಡಿಗೆ ಸಮೀಪದಲ್ಲಿದ್ದ ಊರುಗಳಾದ ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಮತ್ತು ಅದರ ಹತ್ತಿರದಲ್ಲಿದ್ದ ಸಣ್ಣ ಊರುಗಳು. ಯೋಸೇಫನ ಸಂತತಿಯವರು ಈ ಊರುಗಳಲ್ಲಿ ವಾಸವಾಗಿದ್ದರು. ಯೋಸೇಫನು ಇಸ್ರೇಲನ ಮಗನಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳೂ, ಅವುಗಳ ಗ್ರಾಮಗಳೂ ಮನಸ್ಸೆ ಕುಲದವರ ವಶದಲ್ಲಿದ್ದವು. ಈ ಊರುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸಿಸುತ್ತಿದ್ದರು.
Kannada BSI Bible 2016
ಮನಸ್ಸೆಯ ಮಕ್ಕಳ ಮೇರೆಯಲ್ಲಿರುವ ಬೇತ್ಷಾನೂ ಅದರ ಗ್ರಾಮಗಳೂ ತಾನಾಕವೂ ಅದರ ಗ್ರಾಮಗಳೂ ಮೆಗಿದ್ದೋನೂ ಅದರ ಗ್ರಾಮಗಳೂ ದೋರೂ ಅದರ ಗ್ರಾಮಗಳೂ ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಕುಮಾರರು ವಾಸವಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಕುಲದವರ ವಶದಲ್ಲಿದ್ದವು. ಈ ಊರುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸಿಸುತ್ತಿದ್ದರು.
Kannada Bible (KNCL) BSI 2016
ಮನಸ್ಸೆಯ ಸಂತಾನದವರು ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಗ್ರಾಮಗಳನ್ನೂ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಯಕೋಬನ ಮಗ ಜೋಸೆಫನ ಸಂತತಿಯವರು ಈ ಎಲ್ಲಾ ಪ್ರದೇಶಗಳಲ್ಲಿ ವಾಸಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗಾಜವೂ, ಮನಸ್ಸೆಯ ಸಂತಾನದವರ ಮೇರೆಯಲ್ಲಿರುವ ಬೇತ್ ಷೆಯಾನೂ, ತಾನಕವೂ, ಮೆಗಿದ್ದೋ, ದೋರ್ ಮತ್ತು ಇವುಗಳ ಗ್ರಾಮಗಳು ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸವಾಗಿದ್ದರು.