1 Chronicles 7:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರ ಕುಲಚರಿತ್ರೆಯಲ್ಲಿ ಅವರ ನಾಯಕರುಗಳು ಯಾರೆಂಬುದನ್ನು ಬರೆಯಲಾಗಿದೆ. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಇಪ್ಪತ್ತು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಣವೀರರಾದ ಈ ಗೋತ್ರಪ್ರಧಾನರ ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟ ಇಪ್ಪತ್ತು ಸಾವಿರದ ಇನ್ನೂರು ಯುದ್ಧ ಪರಾಕ್ರಮಶಾಲಿಗಳು.
Kannada BSI Bible 2016
ಇವರ ಲೆಕ್ಕವು ತಮ್ಮ ಪಿತೃಗಳ ಮನೆಯ ಯಜಮಾನರ ವಂಶ ಗಳ ವಂಶಾವಳಿಯ ಪ್ರಕಾರವಾಗಿ ಯುದ್ಧ ಪರಾಕ್ರಮಶಾಲಿಗಳಾದವರು ಇಪ್ಪತ್ತುಸಾವಿರದ ಇನ್ನೂರು ಮಂದಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ರಣವೀರರಾದ ಈ ಗೋತ್ರ ಪ್ರಧಾನರ ವಂಶಾವಳಿಯ ಪಟ್ಟಿಯಲ್ಲಿ ಲೆಕ್ಕಿಸಲ್ಪಟ್ಟ ಭಟರು ಇಪ್ಪತ್ತು ಸಾವಿರದ ಇನ್ನೂರು ಮಂದಿ.
Kannada Bible (KNCL) BSI 2016
ಕುಟುಂಬಗಳಿಗನುಗುಣವಾದ ಅಧಿಕೃತ ದಾಖಲೆ - 20,200 ಪುರುಷರು ಅವರ ವಂಶಜರಲ್ಲಿ ಸೈನ್ಯ ಸೇರಲು ಅರ್ಹರಾಗಿದ್ದರೆಂದು ಪಟ್ಟಿಮಾಡಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಅವರ ವಂಶಾವಳಿಯ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿರುವಂತೆ ಈ ಕುಲಗಳ ಪ್ರಬಲ ಯೋಧರು ಮತ್ತು ನಾಯಕರ ಒಟ್ಟು ಸಂಖ್ಯೆ 20,200 ಆಗಿತ್ತು.