1 Chronicles 8:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಎಲ್ಪಾಲನ ಮಕ್ಕಳು ಯಾರೆಂದರೆ: ಏಬೆರ್, ಮಿಷ್ಬಾಮ್, ಶೆಮೆದ್, ಬೆರೀಯ ಮತ್ತು ಶಮ. ಶೆಮೆದನು ಓನೋ ಮತ್ತು ಲೋದ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಊರುಗಳನ್ನೂ ಕಟ್ಟಿಸಿದನು. ಅಯ್ಯಾಲೋನಿನಲ್ಲಿ ವಾಸಿಸುತ್ತಿದ್ದ ಕುಲದವರಿಗೆ ಬೆರೀಯ ಮತ್ತು ಶಮ ಕುಲ ಪ್ರಧಾನರಾಗಿದ್ದರು. ಇವರು ಗತ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಓಡಿಸಿದರು. (Verses 12-13)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಲ್ಪಾಲನ ಮಕ್ಕಳು ಏಬರ್, ಮಿಷ್ಷಾಮ್ ಮತ್ತು ಶೆಮೆದ್. ಇವರೂ ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.
Kannada BSI Bible 2016
ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಲ್ಪಾಲನ ಮಕ್ಕಳು - ಏಬೆರ್, ವಿುಷ್ಷಾಮ್ ಇವರೂ ಓನೋ, ಲೋದ್ ಎಂಬ ಪಟ್ಟಣಗಳನ್ನೂ ಅವುಗಳಿಗೆ ಸೇರುವ ಗ್ರಾಮಗಳನ್ನೂ ಕಟ್ಟಿಸಿದ ಶೆಮೆದನೂ
Kannada Bible (KNCL) BSI 2016
ಎಲ್ಪಾಲನಿಗೆ ಮೂರು ಜನ ಮಕ್ಕಳು - ಏಬೆರ್, ಮಿಷ್ಷಾಮ್, ಶೆಮೆದ್ ಎಂಬವರು. ಓನೋ, ಲೋದ್ ಎಂಬ ಪಟ್ಟಣಗಳನ್ನು ಅವುಗಳ ಸುತ್ತುಮುತ್ತಲಿನ ಗ್ರಾಮಗಳನ್ನೂ ಕಟ್ಟಿಸಿದವನು ಶೆಮೆದ್.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಲ್ಪಾಲನ ಪುತ್ರರು: ಏಬೆರ್, ಮಿಷಾಮ್, ಶೆಮೆದ್. ಶೆಮೆದನು ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.