1 Chronicles 8:28 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಜನರೆಲ್ಲರು ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರ ಗೋತ್ರ ಚರಿತ್ರೆಯಲ್ಲಿ ಇವರನ್ನು ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರೆಲ್ಲಾ ಜೆರುಸಲೇಮಿನಲ್ಲಿ ವಾಸವಾಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ವಂಶಾವಳಿಯ ಪ್ರಕಾರ ಗೋತ್ರಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು.
Kannada BSI Bible 2016
ಇವರೇ ಪಿತೃಗಳಲ್ಲಿ ಯಜಮಾನರಾಗಿದ್ದು ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ವಂಶಾವಳಿಯ ಪ್ರಕಾರ ಗೋತ್ರ ಪ್ರಧಾನರೂ ಯೆರೂಸಲೇವಿುನಲ್ಲಿ ವಾಸಿಸುವವರೂ ಆಗಿದ್ದರು.
Kannada Bible (KNCL) BSI 2016
ಇವರು ಜೆರುಸಲೇಮಿನಲ್ಲಿ ನೆಲೆಸಿದ ಪುರಾತನ ಕುಟುಂಬಗಳ ಮುಖ್ಯಸ್ಥರೂ ಅವರ ಪ್ರಮುಖ ವಂಶಜರೂ ಆಗಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರೇ ಕುಟುಂಬಗಳಲ್ಲಿ ಯಜಮಾನರಾಗಿದ್ದು, ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.