1 Chronicles 9:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಟ್ಟು ಒಂದು ಸಾವಿರದ ಏಳುನೂರ ಅರವತ್ತು ಮಂದಿ ಯಾಜಕರಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ದೇವಾಲಯದ ಕೆಲಸಕಾರ್ಯಗಳ ಜವಾಬ್ದಾರಿಕೆಯನ್ನು ಇವರು ಹೊತ್ತು ಕೊಂಡಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗೋತ್ರ ಪ್ರಧಾನರು ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ, ಇವರ ಸಹೋದರರೂ ಒಟ್ಟು ಸಾವಿರದ ಏಳು ನೂರ ಅರವತ್ತು ಜನರು.
Kannada BSI Bible 2016
ಅವರ ಸಹೋದರರೂ, ತಮ್ಮ ಪಿತೃಗಳ ಮನೆಯಲ್ಲಿ ಯಜಮಾನರು ಸಾವಿರದ ಏಳು ನೂರ ಅರವತ್ತು ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗೋತ್ರಪ್ರಧಾನರೂ ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ ಇವರ ಸಹೋದರರೂ ಒಟ್ಟಿಗೆ ಸಾವಿರದ ಏಳುನೂರ ಅರುವತ್ತು ಮಂದಿ.
Kannada Bible (KNCL) BSI 2016
ಗೋತ್ರಗಳ ಮುಖ್ಯಸ್ಥರಾದ ಯಾಜಕರ ಒಟ್ಟು ಸಂಖ್ಯೆ ಒಂದು ಸಾವಿರದ ಏಳನೂರ ಅರವತ್ತು ಮಂದಿ, ದೇವಾಲಯದ ಎಲ್ಲಾ ಕೆಲಸಗಳಲ್ಲಿ ಅವರು ನಿಪುಣರಾಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಸಹೋದರರೂ ತಮ್ಮ ಕುಟುಂಬಗಳಲ್ಲಿ ಯಜಮಾನರು 1,760 ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿಗಳಾಗಿದ್ದರು.