1 Chronicles 9:16 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಓಬದ್ಯನು ಶೆಮಾಯನ ಮಗ. ಶೆಮಾಯನು ಗಾಲಾಲನ ಮಗ. ಗಾಲಾಲನು ಯೆದೂತೂನನ ಮಗ. ಆಸನ ಮಗನಾದ ಬೆರೆಕ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಆಸನು ಎಲ್ಕಾನನ ಮಗ. ಎಲ್ಕಾನನು ನೆಟೋಫ ಜನರ ಸಮೀಪದ ಗ್ರಾಮದಲ್ಲಿ ವಾಸಿಸುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಶೆಮಾಯನ ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ. ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ.
Kannada BSI Bible 2016
ಯೆದೂತೂನನ ಮಗ ನಾದ ಗಾಲಾಲನ ಮಗನಾದ ಶೆಮಾಯನ ಮಗನಾದ ಓಬದ್ಯನೂ; ಎಲ್ಕಾನನ ಮಗನಾದ ಆಸನ ಮಗನಾದ ಬೆರೆಕ್ಯನೂ ಇವರು ನೆಟೋಫಾತದವರ ಊರುಗಳಲ್ಲಿ ವಾಸವಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಶೆಮಾಯನ ಮಗನೂ ಗಾಲಾಲನ ಮೊಮ್ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ, ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆದುತೂನನ ಮಗ, ಗಲಾಲನ ಮಗ, ಶೆಮಾಯನ ಮಗ, ಓಬದ್ಯನೂ; ಎಲ್ಕಾನನ ಮಗ ಆಸನ ಮಗ ಬೆರೆಕ್ಯನೂ ಇವರು ನೆಟೋಫದವರ ಊರುಗಳಲ್ಲಿ ವಾಸವಾಗಿದ್ದರು.