1 Chronicles 9:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಶಲ್ಲೂಮನು ಕೋರೇಯ ಮಗನು. ಕೋರೇಯ ಎಬ್ಯಾಸಾಫನ ಮಗನು. ಎಬ್ಯಾಸಾಫನು ಕೋರಹನ ಮಗನು. ಶಲ್ಲೂಮನೂ ಅವನ ಸಹೋದರರೂ ದ್ವಾರಪಾಲಕರಾಗಿದ್ದರು. ಅವರೆಲ್ಲರೂ ಕೋರಹನ ಸಂತತಿಯವರು. ಪವಿತ್ರಗುಡಾರದ ಬಾಗಿಲುಗಳನ್ನು ಕಾಯುವ ಜವಾಬ್ದಾರಿಕೆ ಇವರದಾಗಿತ್ತು. ತಮ್ಮ ಪೂರ್ವಿಕರು ಮಾಡಿದ್ದಂತೆಯೇ ಅವರು ಈ ಕೆಲಸವನ್ನು ಮಾಡಿದರು. ಯೆಹೋವನ ಪಾಳೆಯದ ಪ್ರವೇಶದ್ವಾರವನ್ನು ಕಾಯುವುದು ಅವರ ಪೂರ್ವಿಕರ ಉದ್ಯೋಗವಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ, ಅವನ ಗೋತ್ರ ಬಂಧುಗಳಾದ ಮಿಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕ ಸೇವೆಗೆ ನೇಮಿಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶ ದ್ವಾರವನ್ನು ಕಾಯುವವರಾಗಿದ್ದರು.
Kannada BSI Bible 2016
ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮಗನಾದ ಕೋರೇಯ ಮಗನಾದ ಶಲ್ಲೂಮನೂ ಅವನ ತಂದೆಯ ಮನೆಯವರಾಗಿರುವ ತನ್ನ ಸಹೋ ದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲೆ ಇದ್ದು ಗುಡಾರದ ಬಾಗಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಕರ್ತನ ಸೈನ್ಯದ ಮೇಲೆ ಇದ್ದು ಪ್ರವೇಶ ಸ್ಥಳದ ಕಾವಲಿನವರಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ ಅವನ ಗೋತ್ರ ಬಂಧುಗಳಾದ ವಿುಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕಸೇವೆಗೆ ನೇವಿುಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶಸ್ಥಳವನ್ನು ಕಾಯುವವರಾಗಿದ್ದರು.
Kannada Bible (KNCL) BSI 2016
ಕೋರೇಯನ ಮಗನೂ ಎಬ್ಯಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನು ಹಾಗೂ ಕೋರಹನ ಗೋತ್ರದ ಸದಸ್ಯರು, ದೇವದರ್ಶನದ ಗುಡಾರದ ದ್ವಾರವನ್ನು ಕಾಯುವ ಜವಬ್ದಾರಿ ವಹಿಸಿಕೊಂಡು ಇದ್ದರು.ಅವರ ಪೂರ್ವಜರು ಸಹ ಸರ್ವೇಶ್ವರನ ಗುಡಾರವನ್ನು ಕಾಯುವವರಾಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮೊಮ್ಮಗನೂ ಕೋರೇಯನ ಮರಿಮಗನಾದ ಶಲ್ಲೂಮನೂ, ಅವನ ತಂದೆಯ ಮನೆಯವರಾಗಿರುವ ತನ್ನ ಸಹೋದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲಿದ್ದು, ದೇವದರ್ಶನ ಗುಡಾರದ ಬಾಗಿಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಯೆಹೋವ ದೇವರ ಗುಡಾರದ ದ್ವಾರಗಳ ಕಾವಲಿನವರಾಗಿದ್ದರು.