1 Chronicles 9:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಲೇವಿಕುಲದ ನಾಲ್ಕು ಮಂದಿ ಎಲ್ಲಾ ದ್ವಾರಪಾಲಕರಿಗೆ ನಾಯಕರಾಗಿದ್ದರು. ದೇವಾಲಯದ ಕೋಣೆಗಳನ್ನೂ ಅಲ್ಲಿಟ್ಟಿರುವ ಹಣದ ಪೆಟ್ಟಿಗೆಗಳನ್ನೂ ಅವರು ಕಾಯುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೇವಿಯರಾದ ಮೇಲ್ಕಂಡ ನಾಲ್ಕು ಜನರು ದ್ವಾರಪಾಲಕರ ಮುಖ್ಯಸ್ಥರಾಗಿ ದೇವಾಲಯದ ಕೋಣೆಗಳನ್ನೂ ಮತ್ತು ಭಂಡಾರಗಳನ್ನೂ ನೋಡಿಕೊಳ್ಳುವ ಜವಾಬ್ದಾರರಾಗಿದ್ದರು.
Kannada BSI Bible 2016
ದ್ವಾರಪಾಲಕರಲ್ಲಿರುವ ನಾಲ್ಕುಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯ ಉಗ್ರಾಣ ಗಳ ಮೇಲೆಯೂ ಬೊಕ್ಕಸಗಳ ಮೇಲೆಯೂ ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಲೇವಿಯರಾದ ಮೇಲ್ಕಂಡ ನಾಲ್ಕು ಮಂದಿ ದ್ವಾರಪಾಲಕ ಮುಖ್ಯಸ್ಥರು ಜವಾಬುದಾರರಾಗಿದ್ದು ದೇವಾಲಯದ ಕೋಣೆಗಳನ್ನೂ ಭಂಡಾರಗಳನ್ನೂ ನೋಡಿಕೊಳ್ಳುವವರಾಗಿದ್ದರು.
Kannada Bible (KNCL) BSI 2016
ನಾಲ್ಕು ಜನ ಮುಖ್ಯ ದ್ವಾರಪಾಲಕರು ಲೇವಿಯರಾಗಿದ್ದು ಅವರಿಗೆ ಅಂತಿಮ ಜವಾಬ್ದಾರಿ ಕೊಡಲಾಗಿತ್ತು. ದೇವಾಲಯದ ಕೋಣೆಗಳನ್ನು ಹಾಗೂ ಭಂಡಾರಗಳನ್ನು ಅವರು ನೋಡಿಕೊಳ್ಳಬೇಕಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ದ್ವಾರಪಾಲಕರಲ್ಲಿರುವ ನಾಲ್ಕು ಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯದ ಉಗ್ರಾಣಗಳ ಮೇಲೆಯೂ ಬೊಕ್ಕಸಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು.