1 Chronicles 9:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರಲ್ಲಿ ಕೆಲವರು ದೇವಾಲಯದ ಪಾತ್ರೆಗಳಿಗೆ ಮೇಲ್ವಿಚಾರಕರಾಗಿದ್ದು ಅವುಗಳನ್ನು ಒಳಗೆ ತರುವಾಗಲೂ ಹೊರಗೆ ತೆಗೆದುಕೊಂಡು ಹೋಗುವಾಗಲೂ ಲೆಕ್ಕಮಾಡುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವರಲ್ಲಿ ಕೆಲವರು ಪೂಜಾ ಸಾಮಗ್ರಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವುಗಳನ್ನು ಕೊಡುವಾಗಲೂ ತಿರುಗಿ ತೆಗೆದುಕೊಳ್ಳುವಾಗಲೂ ಲೆಕ್ಕವಿರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
Kannada BSI Bible 2016
ಸೇವೆಯ ಪಾತ್ರೆಗಳನ್ನು ಒಳಕ್ಕೆ ಲೆಕ್ಕದ ಪ್ರಕಾರ ತರುವದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವರಲ್ಲಿ ಕೆಲವರು ಪೂಜಾಸಾಮಗ್ರಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವುಗಳನ್ನು ಕೊಡುವಾಗಲೂ ತಿರಿಗಿ ತೆಗೆದುಕೊಳ್ಳುವಾಗಲೂ ಲೆಕ್ಕಿಸುತ್ತಿದ್ದರು.
Kannada Bible (KNCL) BSI 2016
ಪೂಜಾಸಾಮಗ್ರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇತರ ಲೇವಿಯರದಾಗಿತ್ತು. ಅವುಗಳನ್ನು ಕೊಡುವಾಗಲೂ ಮರಳಿ ತೆಗೆದುಕೊಳ್ಳುವಾಗಲೂ ಲೆಕ್ಕಿಸುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೇವೆಯ ಸಲಕರಣೆಗಳನ್ನು ಒಳಗೆ ಲೆಕ್ಕದ ಪ್ರಕಾರ ತರುವುದಕ್ಕೂ, ಹೊರಗೆ ಲೆಕ್ಕದ ಪ್ರಕಾರ ತರುವುದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.