1 Chronicles 9:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇನ್ನು ಕೆಲವರು ಮರದ ಸಾಮಾನುಗಳಿಗೂ ವಿಶೇಷವಾದ ಪಾತ್ರೆಗಳಿಗೂ ಮೇಲ್ವಿಚಾರಕರಾಗಿದ್ದು ಗೋಧಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ ಮತ್ತು ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರಾಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇನ್ನು ಕೆಲವರು ದೇವಾಲಯದ ಎಲ್ಲಾ ವಸ್ತುಗಳ ಮೇಲ್ವಿಚಾರಕರೂ, ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ, ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರು ಆಗಿದ್ದರು.
Kannada BSI Bible 2016
ಅವರಲ್ಲಿ ಕೆಲವರು ಸಾಮಾನುಗಳನ್ನೂ ಪರಿಶುದ್ಧಸ್ಥಾನದಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಯವಾದ ಹಿಟ್ಟನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಸಾಂಬ್ರಾಣಿಯನ್ನೂ ಸುಗಂಧದ್ರವ್ಯಗಳನ್ನೂ ಕಾಯಲು ನೇಮಿಸಲ್ಪಟ್ಟಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇನ್ನು ಕೆಲವರು ದೇವಾಲಯದ ಎಲ್ಲಾ ಸಾಮಾನುಗಳ ಮೇಲ್ವಿಚಾರಕರೂ ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ, ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರು ಆಗಿದ್ದರು.
Kannada Bible (KNCL) BSI 2016
ಇತರರು ಬೇರೆ ಪವಿತ್ರ ಸಲಕರಣೆಗಳಾದ ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ ಹಾಗೂ ಪರಿಮಳ ದ್ರವ್ಯಗಳ ಸರಬರಾಜು ಮಾಡುವ ಜವಾಬ್ದಾರಿಕೆ ಹೊಂದಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರಲ್ಲಿ ಕೆಲವರು ಸಲಕರಣೆಗಳನ್ನೂ, ಪರಿಶುದ್ಧ ಸ್ಥಾನದಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ, ನಯವಾದ ಹಿಟ್ಟನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಸಾಂಬ್ರಾಣಿಯನ್ನೂ, ಸುಗಂಧಗಳನ್ನೂ ಕಾಯಲು ನೇಮಕರಾಗಿದ್ದರು.