1 Chronicles 9:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೋರಹನ ಕುಲದ ಕೆಲವರಿಗೆ, ಪ್ರತಿ ಸಬ್ಬತ್‌ದಿವಸ ದೇವರ ಸನ್ನಿಧಾನದಲ್ಲಿ ಇಡುವ ನೈವೇದ್ಯದ ರೊಟ್ಟಿಯನ್ನು ತಯಾರಿಸುವ ಕೆಲಸವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಸಹೋದರರಾದ ಮಿಕ್ಕ ಕೆಹಾತ್ಯರಲ್ಲಿ ಕೆಲವರು ಪ್ರತಿ ಸಬ್ಬತ್ತಿನಲ್ಲಿ ನೈವೇದ್ಯದ ರೊಟ್ಟಿಗಳನ್ನು ತಯಾರಿಸುವ ಕೆಲಸವಿತ್ತು.
Kannada BSI Bible 2016
ಸಮ್ಮುಖದ ರೊಟ್ಟಿಯನ್ನು ಪ್ರತಿಸಬ್ಬತ್ ದಿವಸದಲ್ಲಿ ಸಿದ್ಧಮಾಡು ವದಕ್ಕೆ ಕೆಹಾತ್ಯರ ಕುಮಾರರಾದ ಅವರ ಸಹೋದರ ರಲ್ಲಿ ಕೆಲವರು ನೇಮಿಸಲ್ಪಟ್ಟಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಸಹೋದರರಾದ ವಿುಕ್ಕ ಕೆಹಾತ್ಯರಲ್ಲಿ ಕೆಲವರಿಗೆ ಪ್ರತಿ ಸಬ್ಬತ್ತಿನಲ್ಲಿ ನೈವೇದ್ಯದ ರೊಟ್ಟಿಗಳನ್ನು ಕ್ರಮಪಡಿಸುವ ಕೆಲಸವಿತ್ತು.
Kannada Bible (KNCL) BSI 2016
ಕೇಹಾತ್ಯ ಗೋತ್ರದ ಮಿಕ್ಕ ಸದಸ್ಯರು ಪ್ರತೀ ಸಬ್ಬತ್ ದಿನ ದೇವಾಲಯದಲ್ಲಿ ಸಮರ್ಪಿಸಲಾಗುತ್ತಿದ್ದ ನೈವೇದ್ಯದ ರೊಟ್ಟಿಗಳನ್ನು ತಯಾರಿಸುವ ಜವಾಬ್ದಾರಿ ಹೊಂದಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೊಹಾತ್ಯರ ಪುತ್ರರಾದ ಅವರ ಸಹೋದರರಲ್ಲಿ ಇನ್ನೂ ಕೆಲವರು ಸಮ್ಮುಖದ ರೊಟ್ಟಿಯನ್ನು ಪ್ರತಿ ಸಬ್ಬತ್ ದಿನದಲ್ಲಿ ಸಿದ್ಧಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.