1 Corinthians 10:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದು ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ; ಮತ್ತೊಬ್ಬನ ಮನಸ್ಸಾಕ್ಷಿಗಾಗಿಯೇ ಹೇಳಲಾಗಿದೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?
Kannada BSI Bible 2016
ಆದರೆ ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ, ಬೇರೆಯವನ ಮನಸ್ಸಾಕ್ಷಿಗಾಗಿ ನಾನು ಹೇಳುತ್ತೇನೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?
Kannada BSI JV (ಕನ್ನಡ ಸತ್ಯವೇದವು J.V. (BSI))
ಅದು ನಿನ್ನ ಮನಸ್ಸಿನ ಸಂಶಯವಲ್ಲ, ತಿಳಿಸಿದವನ ಮನಸ್ಸಿನಲ್ಲಿರುವ ಸಂಶಯವೇ. ಮತ್ತೊಬ್ಬನ ಮನಸ್ಸಿನಲ್ಲಿರುವ ಸಂಶಯದಿಂದ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?
Kannada Bible (KNCL) BSI 2016
ಅಂದರೆ, ನಿನ್ನ ಸ್ವಂತ ಮನಸ್ಸಾಕ್ಷಿಯ ಸಲುವಾಗಿ ಅಲ್ಲ, ನಿನಗೆ ತಿಳಿಸಿದವನ ಮನಸ್ಸಾಕ್ಷಿಯ ಸಲುವಾಗಿ ಊಟಮಾಡಬೇಡ. ನಿಮ್ಮಲ್ಲಿ ಒಬ್ಬನು, “ನನ್ನ ಸ್ಯಾತಂತ್ರ್ಯಕ್ಕೆ ಇನ್ನೊಬ್ಬನ ಮನಸ್ಸಾಕ್ಷಿ ಏಕೆ ಅಡ್ಡಿಯಾಗಬೇಕು?” ಎಂದು ಕೇಳಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ನಿಮ್ಮ ಮನಸ್ಸಾಕ್ಷಿಯ ಬಗ್ಗೆ ಅಲ್ಲ, ಇತರರ ಮನಸ್ಸಾಕ್ಷಿಯ ಬಗ್ಗೆ ಸೂಚಿಸುತ್ತಿದ್ದೇನೆ. ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಏಕೆ ಅಡ್ಡಿಯಾಗಬೇಕು?