1 Corinthians 12:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೀಗಿರಲಾಗಿ, ನಾನು ನಿಮಗೆ ಹೇಳುವುದೇನೆಂದರೆ, ದೇವರಾತ್ಮನ ಸಹಾಯದಿಂದ ಮಾತಾಡುವ ಯಾವ ವ್ಯಕ್ತಿಯೇ ಆಗಲಿ, "ಯೇಸು ಶಾಪಗ್ರಸ್ತನಾಗಲಿ” ಎಂದು ಹೇಳುವುದಿಲ್ಲ. ಅಂತೆಯೇ ಪವಿತ್ರಾತ್ಮನ ಸಹಾಯವಿಲ್ಲದೆ ಯಾವ ವ್ಯಕ್ತಿಯೇ ಆಗಲಿ, "ಯೇಸುವೇ ಪ್ರಭು” ಎಂದು ಹೇಳಲಾರನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ. ದೇವರಾತ್ಮನ ಪ್ರೇರಣೆಯಿಂದ ಮಾತನಾಡುವ ಯಾವ ಮನುಷ್ಯನಾದರೂ “ಯೇಸುವನ್ನು ಶಾಪಗ್ರಸ್ತನೆಂದು” ಹೇಳುವುದಿಲ್ಲ. ಮತ್ತು ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ “ಯೇಸುವನ್ನು ಕರ್ತನೆಂದು” ಹೇಳಲಾರನು.
Kannada BSI Bible 2016
ಹೀಗಿರುವದರಿಂದ ನಾನು ನಿಮಗೆ ತಿಳಿಸುವದೇನಂದರೆ, ದೇವರಾತ್ಮನಿಂದ ಮಾತನಾಡುವ ಯಾವ ಮನುಷ್ಯನಾದರೂ ಯೇಸು ವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ; ಪವಿತ್ರಾತ್ಮ ನಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರುವದರಿಂದ ನಾನು ನಿಮಗೆ ತಿಳಿಸುವದನ್ನು ಕೇಳಿರಿ; ದೇವರಾತ್ಮನ ಪ್ರೇರಣೆಯಿಂದ ಮಾತಾಡುವ ಯಾವ ಮನುಷ್ಯನಾದರೂ ಯೇಸುವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ, ಮತ್ತು ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.
Kannada Bible (KNCL) BSI 2016
ಇಷ್ಟುಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ: ದೇವರಾತ್ಮರಿಂದ ಮಾತನಾಡುವ ಯಾವನೂ, “ಯೇಸು ಶಾಪಗ್ರಸ್ತನು,” ಎಂದು ಹೇಳುವುದಿಲ್ಲ. ಪವಿತ್ರಾತ್ಮರಿಂದಲೇ ಹೊರತು, ಯಾವನೂ, “ಯೇಸು ಕರ್ತದೇವರು,” ಎಂದು ಹೇಳಲಾರನು.