1 Corinthians 14:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ, ಒಬ್ಬ ವ್ಯಕ್ತಿಯು ಮಾತಾಡುವ ಭಾಷೆಯನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಅವನು ನನಗೆ ವಿದೇಶಿಯನಂತಿರುವನು; ನಾನೂ ಅವನಿಗೆ ವಿದೇಶಿಯನಂತಿರುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಭಾಷೆಯ ಅರ್ಥವು ನನಗೆ ತಿಳಿಯದಿದ್ದರೆ ಮಾತನಾಡುವವನಿಗೆ ನಾನು ಪರದೇಶದವನಂತಿರುವೆನು; ಮಾತನಾಡುವವನು ನನಗೆ ಪರದೇಶಿಯವನಂತಿರುತ್ತಾನೆ.
Kannada BSI Bible 2016
ಆದದರಿಂದ ಭಾಷೆಯ ಅರ್ಥವು ನನಗೆ ಗೊತ್ತಿಲ್ಲ ದಿದ್ದರೆ ಮಾತನಾಡುವವನಿಗೆ ನಾನು ಅನ್ಯದೇಶ ದವನಂತಿರುವೆನು; ಮಾತನಾಡುವವನು ನನಗೆ ಅನ್ಯ ದೇಶದವನಂತಿರುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಭಾಷೆಯ ಅರ್ಥವು ನನಗೆ ತಿಳಿಯದಿದ್ದರೆ ಮಾತಾಡುವವನಿಗೆ ನಾನು ಅನ್ಯದೇಶದವನಂತಿರುವೆನು; ಮಾತಾಡುವವನು ನನಗೆ ಅನ್ಯದೇಶದವನಂತಿರುವನು.
Kannada Bible (KNCL) BSI 2016
ಭಾಷೆಯ ಅರ್ಥವು ನನಗಾಗದಿದ್ದರೆ ಮಾತನಾಡುವವನಿಗೆ ನಾನು ಪರಕೀಯನಂತಾಗುತ್ತೇನೆ; ನನಗೆ ಅವನು ಪರಕೀಯನಂತಾಗುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಭಾಷೆಯ ಅರ್ಥವನ್ನು ಗ್ರಹಿಸದಿದ್ದರೆ, ಮಾತಾಡುವವನಿಗೆ ನಾನು ಅನ್ಯದೇಶದವನಂತಿರುವೆನು, ಮಾತನಾಡುವವನು ನನಗೆ ಅನ್ಯದೇಶದವನಂತಿರುವನು.