1 Corinthians 14:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಆತ್ಮನಿಂದ ಮಾತ್ರ ದೇವರ ಸ್ತೋತ್ರ ಮಾಡಿದರೆ ನೀನು ಹೇಳಿದ್ದು ತಿಳಿಯದೆ ಇರುವ ಇನ್ನೊಬ್ಬನು ನೀನು ಮಾಡುವ ಕೃತಜ್ಞತಾಸ್ತುತಿಗೆ ಅವನು “ಆಮೆನ್” ಎಂದು ಹೇಗೆ ಹೇಳಬಲ್ಲನು? ನೀನು ಮಾತನಾಡಿದು ಅವನಿಗೆ ತಿಳಿಯುವುದಿಲ್ಲವಲ್ಲಾ?
Kannada BSI Bible 2016
ಇದಲ್ಲದೆ ನೀನು ಆತ್ಮದಿಂದ ಸ್ತೋತ್ರ ಮಾಡುವಾಗ ತಿಳುವಳಿಕೆ ಯಿಲ್ಲದವನು ನೀನು ಮಾಡುವ ಕೃತಜ್ಞತಾಸ್ತುತಿಯನ್ನು ತಿಳಿಯದೆ ಇರುವದರಿಂದ ನೀನು ಹೇಳುವದಕ್ಕೆ ಆಮೆನ್ ಎಂದು ಹೇಳುವದು ಹೇಗೆ?
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಆತ್ಮದಿಂದ ಮಾತ್ರ ದೇವರ ಸ್ತೋತ್ರಮಾಡಿದರೆ ಆ ವರವನ್ನು ಹೊಂದದಿರುವ ಸಭೆಯವನಿಗೆ ನೀನು ಹೇಳಿದ್ದು ತಿಳಿಯದೆ ಇರುವದರಿಂದ ನೀನು ಮಾಡುವ ಕೃತಜ್ಞತಾಸ್ತುತಿಗೆ ಅವನು ಆಮೆನ್ ಎಂದು ಹೇಗೆ ಹೇಳಾನು?
Kannada Bible (KNCL) BSI 2016
ಸಭೆಯಲ್ಲಿ ನೀನು ಆತ್ಮದಿಂದ ಮಾತ್ರ ದೇವರ ಸ್ತುತಿಮಾಡಿದರೆ ನಿನ್ನ ಹಾಗೆ ಪರವಶನಲ್ಲದವನು ನಿನ್ನ ಕೃತಜ್ಞತಾ ಸ್ತುತಿಗೆ ‘ಆಮೆನ್’ ಎಂದು ಹೇಗೆ ತಾನೇ ಹೇಳಬಲ್ಲನು? ನೀನು ಹೇಳುವುದೇ ಅವನಿಗೆ ತಿಳಿಯುವುದಿಲ್ಲವಲ್ಲಾ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಆತ್ಮದಲ್ಲಿ ಮಾತ್ರ ಸ್ತೋತ್ರ ಮಾಡಿದರೆ, ತಿಳುವಳಿಕೆ ಇಲ್ಲದೆ ಕುಳಿತಿರುವವನು ನಿನ್ನ ಕೃತಜ್ಞತಾಸ್ತುತಿಗೆ, “ಆಮೆನ್” ಎಂದು ಹೇಳುವುದು ಹೇಗೆ?