1 Corinthians 14:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಅನ್ಯಭಾಷೆಯವರ ಮೂಲಕವಾಗಿಯೂ ಅನ್ಯದೇಶಸ್ಥರ ಬಾಯಿಂದಲೂ ನಾನು ಈ ಜನರ ಸಂಗಡ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವುದಿಲ್ಲವೆಂದು ಕರ್ತನು ಹೇಳುತ್ತಾನೆಂಬುದಾಗಿ” ಧರ್ಮಶಾಸ್ತ್ರದಲ್ಲಿ ಬರೆದಿದೆ.
Kannada BSI Bible 2016
ಬೇರೆ ಭಾಷೆಯವರ ಮೂಲಕವಾಗಿಯೂ ಬೇರೆ ಯವರ ತುಟಿಗಳಿಂದಲೂ ನಾನು ಈ ಜನರೊಂದಿಗೆ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವದಿಲ್ಲ ಎಂದು ಕರ್ತನು ಹೇಳುತ್ತಾನೆಂಬ ದಾಗಿ ನ್ಯಾಯಪ್ರಮಾಣದಲ್ಲಿ ಬರೆದದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನ್ಯಭಾಷೆಯವರ ಮೂಲಕವಾಗಿಯೂ ಪರದೇಶಸ್ಥರ ನಾಲಿಗೆಯಿಂದಲೂ ನಾನು ಈ ಜನರ ಸಂಗಡ ಮಾತಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಕೊಡುವದಿಲ್ಲವೆಂದು ಕರ್ತನು ಹೇಳುತ್ತಾನೆಂಬದಾಗಿ ಧರ್ಮಶಾಸ್ತ್ರದಲ್ಲಿ ಬರೆದದೆ.
Kannada Bible (KNCL) BSI 2016
ಪವಿತ್ರಗ್ರಂಥದಲ್ಲಿ ಇಂತಿದೆ: ಅನ್ಯಭಾಷೆಯವರ ಮುಖಾಂತರ ಅನ್ಯದೇಶೀಯರ ಬಾಯ ಮುಖಾಂತರ ನಾನೆನ್ನ ಜನರೊಡನೆ ಮಾತಾಡಿದಾಗಲೂ ಎನ್ನ ಮಾತಿಗೆ ಕಿವಿಗೊಡರವರು, ಎಂದರು ಪ್ರಭು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಬೇರೆಭಾಷೆಯವರ ಮೂಲಕವಾಗಿಯೂ ವಿದೇಶದವರ ತುಟಿಗಳಿಂದಲೂ ನಾನು ಈ ಜನರೊಡನೆ ಮಾತಾಡುವೆನು, ಆದರೂ ಅವರು ನನಗೆ ಕಿವಿಗೊಡುವುದಿಲ್ಲವೆಂದು ಕರ್ತದೇವರು ಹೇಳುತ್ತಾರೆ,” ಎಂದು ನಿಯಮದಲ್ಲಿ ಬರೆದಿದೆ.