1 Corinthians 14:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದ್ದರಿಂದ ಅನ್ಯಭಾಷೆಗಳನ್ನಾಡುವುದು ಯೇಸುವನ್ನು ನಂಬದವರಿಗೆ ಸೂಚನೆಯಾಗಿದೆಯೇ ಹೊರತು ಯೇಸುವನ್ನು ನಂಬುವವರಿಗೆ ಸೂಚನೆಯಲ್ಲವೆಂದು ನಾವು ತಿಳಿದುಕೊಳ್ಳಬೇಕು. ಆದರೆ ಪ್ರವಾದನೆಯು ಯೇಸುವನ್ನು ನಂಬದವರಿಗಾಗಿಯಲ್ಲ ನಂಬುವವರಿಗಾಗಿಯೇ ಇದೆ.
Kannada BSI Bible 2016
ಆದದ ರಿಂದ ಭಾಷೆಗಳು ನಂಬುವವರಿಗೆ ಅಲ್ಲ, ನಂಬದವರಿಗೆ ಸೂಚನೆಯಾಗಿವೆ; ಆದರೆ ಪ್ರವಾದಿಸುವದು ನಂಬದ ವರಿಗಲ್ಲ, ನಂಬುವವರಿಗೆ ಸೂಚನೆಯಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದದರಿಂದ ವಾಣಿಗಳನ್ನಾಡುವದು ನಂಬದವರಿಗೆ ಸೂಚನೆಗಾಗಿದೆ ಹೊರತು ನಂಬುವವರಿಗೆ ಸೂಚನೆಯಲ್ಲವೆಂದು ನಾವು ತಿಳುಕೊಳ್ಳಬೇಕು. ಆದರೆ ಪ್ರವಾದನೆಯು ನಂಬದವರಿಗೋಸ್ಕರವಲ್ಲ ನಂಬುವವರಿಗೋಸ್ಕರವಾಗಿದೆ.
Kannada Bible (KNCL) BSI 2016
ಪರವಶಾಭಾಷೆಗಳನ್ನು ಆಡುವುದರ ಸಾಕ್ಷ್ಯ ವಿಶ್ವಾಸಿಗಳಿಗಲ್ಲ, ಅವಿಶ್ವಾಸಿಗಳಿಗೆ. ದೇವರ ವಾಕ್ಯವನ್ನು ಪ್ರಬೋಧಿಸುವುದರ ಸಾಕ್ಷ್ಯವು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ, ಅನ್ಯಭಾಷೆಗಳನ್ನಾಡುವುದು ವಿಶ್ವಾಸಿಗಳಿಗೆ ಅಲ್ಲ, ಅವಿಶ್ವಾಸಿಗಳಿಗೆ ಸೂಚನೆಯಾಗಿದೆ. ಆದರೆ ಪ್ರವಾದಿಸುವುದು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ ಸೂಚನೆಯಾಗಿದೆ.