1 Corinthians 14:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಸೇರಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ ಈ ಭಾಷೆಯನ್ನು ತಿಳಿಯದ ಬೇರೆಯವರು ಅಥವಾ ಕ್ರಿಸ್ತ ನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ, ನಿಮಗೆ ಹುಚ್ಚು ಹಿಡಿದಿದೆ ಎಂದು ಹೇಳುವುದಿಲ್ಲವೋ?
Kannada BSI Bible 2016
ಆದ ಕಾರಣ ಸಭೆಯೆಲ್ಲವೂ ಒಂದು ಸ್ಥಳದಲ್ಲಿ ಕೂಡಿ ಬಂದಾಗ ಎಲ್ಲರೂ ಭಾಷೆಗಳನ್ನಾಡುವದಾದರೆ ತಿಳುವಳಿಕೆ ಯಿಲ್ಲದವರು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು ನೀವು ಹುಚ್ಚರಾಗಿದ್ದೀರೆಂದು ಹೇಳುವದಿಲ್ಲವೇ?
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಬಂದಾಗ ಎಲ್ಲರೂ ವಾಣಿಗಳನ್ನಾಡಿದರೆ ಈ ವರವನ್ನು ಹೊಂದದಿರುವ ಸಭೆಯವರು ಅಥವಾ ಕ್ರಿಸ್ತನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ - ನಿಮಗೆ ಹುಚ್ಚು ಹಿಡಿದದೆ ಎಂದು ಹೇಳುವದಿಲ್ಲವೋ?
Kannada Bible (KNCL) BSI 2016
ಒಂದು ಕಡೆ ಎಲ್ಲರೂ ಸಭೆ ಸೇರಿದಾಗ ಪ್ರತಿಯೊಬ್ಬನೂ ಪರವಶಾಭಾಷೆಗಳನ್ನು ಆಡಲು ಆರಂಭಿಸಿದರೆ ಅಲ್ಲಿಗೆ ಬರುವ ಅಪರಿಚಿತರು, ಅವಿಶ್ವಾಸಿಗಳು ನಿಮ್ಮನ್ನು ಹುಚ್ಚರೆಂದು ಕರೆಯಲಾರರೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದಕಾರಣ ಸಭೆಯೆಲ್ಲವೂ ಕೂಡಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ, ಅಜ್ಞಾನಿಗಳು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು, ನೀವು ಹುಚ್ಚರೆಂದು ಹೇಳುವುದಿಲ್ಲವೇ?