1 Corinthians 14:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಾಗೆಯೇ ನೀವೂ ಸಹ ಸ್ಪಷ್ಟವಾದ ಭಾಷೆಯನ್ನು ನಿಮ್ಮ ಬಾಯಿಂದ ಮಾತನಾಡದೆ ಹೋದರೆ, ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ.
Kannada BSI Bible 2016
ಹಾಗೆಯೇ ನೀವು ಸುಲಭವಾಗಿ ತಿಳಿಯಬಹುದಾದ ಮಾತುಗಳನ್ನಾಡದೆ ಹೋದರೆ ಮಾತನಾಡಿದ್ದು ಏನೆಂದು ಹೇಗೆ ತಿಳಿದೀತು? ನೀವು ಗಾಳಿಯಲ್ಲಿ ಮಾತನಾಡಿದ ಹಾಗಿರುವದಷ್ಟೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಾಗೆಯೇ ನೀವೂ ತಿಳಿಯಬಹುದಾದ ಭಾಷೆಯನ್ನೂ ಬಾಯಿಂದ ಆಡದೆಹೋದರೆ ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿಯುವದು? ನೀವು ಗಾಳಿಯ ಸಂಗಡ ಮಾತಾಡಿದ ಹಾಗಿರುವದಷ್ಟೆ.
Kannada Bible (KNCL) BSI 2016
ಅಂತೆಯೇ, ನೀವು ಸಹ ಪರವಶಾಭಾಷೆಯನ್ನು ಆಡುವಾಗ, ಇತರರಿಗೆ ಅದು ಅರ್ಥವಾಗದಿದ್ದರೆ, ಅವರು ನಿಮ್ಮ ಮಾತನ್ನು ತಿಳಿದುಕೊಳ್ಳುವುದಾದರೂ ಹೇಗೆ? ನಿಮ್ಮ ಮಾತು ಗಾಳಿ ಪಾಲಾಗುತ್ತದಷ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದರಂತೆಯೇ, ನೀವೂ ಸ್ಪಷ್ಟವಾದ ಭಾಷೆಯಿಂದ ಮಾತನಾಡದೆ ಹೋದರೆ, ಮಾತನಾಡಿದ್ದು ಏನೆಂದು ತಿಳಿಯುವುದು ಹೇಗೆ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ.