1 Corinthians 16:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ತಿಮೊಥೆಯನು ನಿಮ್ಮ ಬಳಿಗೆ ಬರಬಹುದು. ಅವನು ನಿಮ್ಮೊಂದಿಗಿರುವಾಗ ಅವನಿಗೆ ಚಿಂತೆಯಾಗದಂತೆ ನೋಡಿಕೊಳ್ಳಿರಿ. ನಾನು ಪ್ರಭುವಿಗೋಸ್ಕರ ಕೆಲಸ ಮಾಡುತ್ತಿರುವಂತೆ ಅವನು ಸಹ ಮಾಡುತ್ತಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಿಮೊಥೆಯನು ಬಂದರೆ ಅವನು ನಿಮ್ಮಲ್ಲಿ ನಿರ್ಭಯನಾಗಿರುವಂತೆ ನೋಡಿಕೊಳ್ಳಿರಿ; ಅವನು ಸಹ ನನ್ನ ಹಾಗೆಯೇ ಕರ್ತನ ಸೇವೆಯನ್ನು ಮಾಡುತ್ತಿದ್ದಾನಲ್ಲಾ.
Kannada BSI Bible 2016
ತಿಮೋಥೆಯನು ಬಂದರೆ ಅವನು ನಿಮ್ಮ ಬಳಿ ಯಲ್ಲಿ ಭಯವಿಲ್ಲದೆ ಇರುವಂತೆ ನೋಡಿಕೊಳ್ಳಿರಿ; ನನ್ನ ಹಾಗೆಯೇ ಅವನು ಕರ್ತನ ಕೆಲಸವನ್ನು ನಡಿಸುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ತಿಮೊಥೆಯನು ಬಂದರೆ ಅವನು ನಿಮ್ಮ ಬಳಿಯಲ್ಲಿ ಭಯವಿಲ್ಲದೆ ಇರುವಂತೆ ನೋಡಿಕೊಳ್ಳಿರಿ; ನನ್ನ ಹಾಗೆಯೇ ಕರ್ತನ ಕೆಲಸವನ್ನು ನಡಿಸುತ್ತಾನೆ;
Kannada Bible (KNCL) BSI 2016
ತಿಮೊಥೇಯನು ಬಂದರೆ ಆತನಿಗೆ ಯಾವ ಚಿಂತೆಯೂ ಇರದಂತೆ ನೋಡಿಕೊಳ್ಳಿ. ಆತನು ನನ್ನ ಹಾಗೆ ಪ್ರಭುವಿನ ಸೇವೆಯಲ್ಲಿಯೇ ನಿರತನಾಗಿರುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಹಾಗೆಯೇ ತಿಮೊಥೆ ಕರ್ತನ ಸೇವೆ ಮಾಡುತ್ತಿದ್ದಾನೆ. ಅವನು ಬಂದರೆ, ಅವನು ನಿಮ್ಮೊಂದಿಗಿರುವಾಗ ಅವನಿಗೆ ಯಾವ ಭಯವೂ ಇಲ್ಲದಂತೆ ನೋಡಿಕೊಳ್ಳಿರಿ.