1 Corinthians 16:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈಗ ನಿಮ್ಮ ಬಳಿಗೆ ಬರಲು ನನಗೆ ಇಷ್ಟವಿಲ್ಲ. ಏಕೆಂದರೆ ನಾನು ಬೇರೆ ಸ್ಥಳಗಳಿಗೆ ಹೋಗಬೇಕಾಗಿರುವುದರಿಂದ ನಿಮ್ಮೊಂದಿಗೆ ಬಹಳ ಕಾಲವಿರಲು ಸಾಧ್ಯವಿಲ್ಲ. ಪ್ರಭುವು ಅವಕಾಶಕೊಡುವುದಾದರೆ, ನಾನು ನಿಮ್ಮೊಂದಿಗೆ ದೀರ್ಘಕಾಲ ತಂಗುವ ನಿರೀಕ್ಷೆಯಿಂದಿದ್ದೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಹಾದುಹೋಗುವ ಈ ಸ್ವಲ್ಪ ಸಮಯದಲ್ಲಿ ನಿಮ್ಮನ್ನು ನೋಡಲು ಬಯಸುವುದಿಲ್ಲ. ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ತಂಗಲು ಬಯಸುತ್ತೇನೆ.
Kannada BSI Bible 2016
ಈಗ ನನ್ನ ಪ್ರಯಾಣದಲ್ಲಿ ನಿಮ್ಮನ್ನು ನೋಡಲು ನನಗೆ ಇಷ್ಟವಿಲ್ಲ, ಕರ್ತನ ಅಪ್ಪಣೆಯಾದರೆ ನಾನು ನಿಮ್ಮೊಂದಿಗೆ ಸ್ವಲ್ಪ ಕಾಲ ಇರುವದಕ್ಕೆ ನಿರೀಕ್ಷಿಸುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಸಮಯದಲ್ಲಿ ಹೋಗುಹೋಗುತ್ತಾ ನಿಮ್ಮನ್ನು ನೋಡುವದಕ್ಕೆ ನನಗೆ ಇಷ್ಟವಿಲ್ಲ; ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.
Kannada Bible (KNCL) BSI 2016
ಪ್ರಯಾಣದ ನಡುವೆ ನಿಮ್ಮನ್ನು ನೋಡಿ ಹೋಗಲು ನನಗೆ ಇಷ್ಟವಿಲ್ಲ. ಪ್ರಭುವಿನ ಚಿತ್ತವಾದರೆ, ಕೊಂಚಕಾಲವಾದರೂ ನಿಮ್ಮೊಡನೆ ಕಾಲಕಳೆಯಬೇಕೆಂದಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಹಾದುಹೋಗುವಾಗ, ನಿಮ್ಮನ್ನು ಸ್ವಲ್ಪ ಸಮಯ ಮಾತ್ರ ಸಂದರ್ಶಿಸುವುದಕ್ಕೆ ನನಗೆ ಇಷ್ಟವಿಲ್ಲ. ಕರ್ತನು ಅನುಮತಿಸಿದರೆ, ನಿಮ್ಮ ಬಳಿಯಲ್ಲಿ ಬಂದು ಹೆಚ್ಚುಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.