1 Corinthians 16:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾಕೆಂದರೆ ಮಹತ್ವವಾದ ಮತ್ತು ಫಲಭರಿತವಾದ ಸೇವೆಯನ್ನು ಮಾಡಲು ಇಲ್ಲಿ ನನಗೆ ಒಳ್ಳೆಯ ಅವಕಾಶಗಳಿವೆ. ಆದರೂ ಇಲ್ಲಿ ನನಗೆ ಅನೇಕ ವಿರೋಧಿಗಳಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಕೆಂದರೆ ಸೇವೆಗೆ ಅನುಕೂಲವೂ, ಸಫಲವೂ ಆಗಿರುವ ಹೆಬ್ಬಾಗಿಲೊಂದು ನನಗಾಗಿ ತೆರೆಯಲ್ಪಟ್ಟಿದೆ. ಹಾಗೆಯೇ ವಿರೋಧಿಗಳೂ ಅನೇಕರಿದ್ದಾರೆ.
Kannada BSI Bible 2016
ಕಾರ್ಯಸಾಧಕವಾಗುವ ದೊಡ್ಡದೊಂದು ಬಾಗಲು ನನಗೋಸ್ಕರ ತೆರೆಯಲ್ಪಟ್ಟಿದೆ, ಅನೇಕ ವಿರೋಧಿಗಳು ಇದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಕಂದರೆ ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ನನಗುಂಟು ಮತ್ತು ವಿರೋಧಿಗಳು ಬಹಳ ಮಂದಿ ಇದ್ದಾರೆ.
Kannada Bible (KNCL) BSI 2016
ಇಲ್ಲಿ ಅನೇಕ ವಿರೋಧಿಗಳಿದ್ದರೂ ಶುಭಸಂದೇಶದ ಕಾರ್ಯವನ್ನು ಕೈಗೊಳ್ಳಲು ಮಹಾದ್ವಾರಗಳು ನನಗೆ ತೆರೆದಿವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ, ಪರಿಣಾಮಕಾರಿಯಾದ ಸೇವೆಗೆ ದೊಡ್ಡದಾಗಿ ಬಾಗಿಲು ನನಗೆ ತೆರೆದಿದೆ, ಬಹಳ ಜನ ವಿರೋಧಿಗಳೂ ಇದ್ದಾರೆ.