1 Corinthians 2:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”
Kannada BSI Bible 2016
ಆದರೆ ಬರೆದಿರುವ ಪ್ರಕಾರ--ದೇವರು ತನ್ನನ್ನು ಪ್ರೀತಿಸು ವವರಿಗಾಗಿ ಸಿದ್ಧಮಾಡಿರುವಂಥವುಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಇಲ್ಲವೆ ಅವು ಮನುಷ್ಯನ ಹೃದಯದಲ್ಲಿ ಸೇರಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಬರೆದಿರುವ ಪ್ರಕಾರ - ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.
Kannada Bible (KNCL) BSI 2016
ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಕಣ್ಣಾವುದೂ ಕಂಡಿಲ್ಲ, ಕಿವಿಯಾವುದೂ ಕೇಳಿಲ್ಲ. ಮನುಜಕಲ್ಪನೆಗೂ ಎಟುಕಲಿಲ್ಲ. ಅಂಥ ಅತಿಶಯಗಳನ್ನು ಸಜ್ಜುಗೊಳಿಸಿರುವನು, ತನ್ನನೊಲಿದವರಿಗೆ ಪರಮದೇವನು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “ದೇವರು ತಮ್ಮನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದ್ದನ್ನು ಯಾವ ಕಣ್ಣೂ ಕಾಣಲಿಲ್ಲ, ಯಾವ ಕಿವಿಯೂ ಕೇಳಲಿಲ್ಲ, ಅದು ಮನುಷ್ಯನ ಹೃದಯದಲ್ಲಿಯೂ ಹುಟ್ಟಲಿಲ್ಲ.”