1 Corinthians 6:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ನೀವು ನಿಮ್ಮ ಸ್ವಂತ ಸಹೋದರರಿಗೆ ಅನ್ಯಾಯವನ್ನು ಮತ್ತು ಮೋಸವನ್ನು ಮಾಡಿದ್ದೀರಿ.
Kannada BSI Bible 2016
ನೀವು ನಿಮ್ಮ ಸಹೋದರ ರಿಗೆ ಅನ್ಯಾಯ ಮಾಡುತ್ತೀರಿ; ಅವರನ್ನೇ ಅಪಹರಿಸುತ್ತೀರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ನೀವು ಅನ್ಯಾಯಮಾಡುತ್ತೀರಿ; ಆಸ್ತಿಯನ್ನು ಅಪಹರಿಸುತ್ತೀರಿ; ಸಹೋದರರಲ್ಲಿಯೇ ಹೀಗೆ ಮಾಡುತ್ತೀರಿ.
Kannada Bible (KNCL) BSI 2016
ಅದಕ್ಕೆ ಬದಲು ನೀವೇ ಅನ್ಯಾಯಮಾಡುತ್ತೀರಿ; ನೀವೇ ಸುಲಿಗೆಮಾಡುತ್ತೀರಿ; ಅದೂ ಸಹೋದರರಿಗೆ ಹೀಗೆ ಮಾಡುತ್ತೀರಿ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಬದಲಾಗಿ ನೀವೇ ನಿಮ್ಮ ಸಹೋದರರಿಗೆ ಅನ್ಯಾಯ ಮಾಡಿ ಮೋಸಮಾಡುತ್ತೀರಲ್ಲಾ?