1 Corinthians 8:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮಗೆ ತಿಳುವಳಿಕೆ ಇರುವುದರಿಂದ ನೀವು ವಿಗ್ರಹದ ಗುಡಿಯೊಂದರಲ್ಲಿ ಸಂಕೋಚವಿಲ್ಲದೆ ಊಟ ಮಾಡಬಹುದು. ನೀವು ಅಲ್ಲಿ ಊಟ ಮಾಡುವುದನ್ನು ನಂಬಿಕೆಯಲ್ಲಿ ಬಲಹೀನನಾದ ವ್ಯಕ್ತಿಯೊಬ್ಬನು ನೋಡಿ, ವಿಗ್ರಹಗಳಿಗೆ ಅರ್ಪಿತವಾದ ಮಾಂಸವನ್ನು ತಿನ್ನಲು ಪ್ರೋತ್ಸಾಹಗೊಳ್ಳಬಹುದು. ಆದರೆ ಅದನ್ನು ತಿನ್ನಕೊಡದೆಂಬ ಭಾವನೆ ಅವನಲ್ಲಿ ಆಳವಾಗಿ ಬೇರೂರಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ.
Kannada BSI Bible 2016
ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲ ವಾದ ಮನಸ್ಸಾಕ್ಷಿಯುಳ್ಳ ಯಾವನಾದರೂ ಕಂಡರೆ ಅವನೂ ವಿಗ್ರಹಕ್ಕೆ ಸಮರ್ಪಣೆ ಮಾಡಿದ ಪದಾರ್ಥ ಗಳನ್ನು ತಿನ್ನುವದಕ್ಕೆ ಧೈರ್ಯ ತಂದುಕೊಂಡಾನಲ್ಲವೇ?
Kannada BSI JV (ಕನ್ನಡ ಸತ್ಯವೇದವು J.V. (BSI))
ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲವಾದ ಮನಸ್ಸುಳ್ಳ ಸಹೋದರನು ಕಂಡರೆ ಅವನೂ ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವದಕ್ಕೆ ಧೈರ್ಯತಂದುಕೊಂಡಾನಲ್ಲವೇ.
Kannada Bible (KNCL) BSI 2016
ನೈಜ ಅರಿವುಳ್ಳವನೆಂದು ಹೇಳಿಕೊಳ್ಳುವ ನೀನು ವಿಗ್ರಹದ ಗುಡಿಯಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲ ಮನಸ್ಸಾಕ್ಷಿಯುಳ್ಳ ಸೋದರನು ಕಂಡರೆ, ಅವನು ಸಹ ನೈವೇದ್ಯಮಾಡಿದ ಪದಾರ್ಥವನ್ನು ತಿನ್ನಲು ಧೈರ್ಯಗೊಳ್ಳಲಾರನೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಲ್ಲಾ ತಿಳುವಳಿಕೆಯಿರುವ ನೀನು ವಿಗ್ರಹದ ಗುಡಿಯಲ್ಲಿ ತಿನ್ನುವುದನ್ನು ನೋಡಿದರೆ ಬಲಹೀನ ಮನಸ್ಸಾಕ್ಷಿಯುಳ್ಳ ಸಹೋದರನು, ತಾನೂ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ತಿನ್ನುವುದಕ್ಕೆ ಧೈರ್ಯಗೊಳ್ಳುವನಲ್ಲವೇ?