1 Corinthians 9:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆತನು ನಿಜವಾಗಿಯೂ ನಮ್ಮ ಬಗ್ಗೆ ಮಾತಾಡುತ್ತಿದ್ದನು. ಹೌದು, ಪವಿತ್ರ ಗ್ರಂಥವು ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಮತ್ತು ಒಕ್ಕುವವನು ತಮ್ಮ ಕೆಲಸಕ್ಕೆ ಸ್ವಲ್ಪ ಧಾನ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಖಂಡಿತವಾಗಿ ನಮಗೋಸ್ಕರವಾಗಿಯೇ ಆತನು ಹೇಳುತ್ತಾನಲ್ಲವೇ? ಹೌದು, ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ ನಿರೀಕ್ಷೆಯಿಂದ ಉಳಬೇಕು, ಹಾಗೂ ಒಕ್ಕುವವನು ತನಗೆ ಸುಗ್ಗಿಯಲ್ಲಿ ಪಾಲು ದೊರಕುವುದೆಂದು ನಿರೀಕ್ಷೆಯಲ್ಲಿ ಒಕ್ಕಬೇಕು.
Kannada BSI Bible 2016
ಇಲ್ಲವೆ ನಮಗೋಸ್ಕರ ವಾಗಿಯೇ ಆತನು ಹೇಳುತ್ತಾನೋ? ಉಳುವವನು ನಿರೀಕ್ಷೆಯಿಂದ ಉಳಬೇಕು, ನಿರೀಕ್ಷೆಯಲ್ಲಿ ಕಣತುಳಿಸು ವವನು ತನ್ನ ನಿರೀಕ್ಷೆಯಲ್ಲಿ ಪಾಲುಗಾರನಾಗಿರಬೇಕು ಎಂದು ನಮಗೋಸ್ಕರ ನಿಸ್ಸಂದೇಹವಾಗಿ ಇದು ಬರೆಯಲ್ಪಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರು ಚಿಂತಿಸುವದು ಎತ್ತುಗಳಿಗಾಗಿಯೋ? ಅಥವಾ ನಮಗೋಸ್ಕರವಾಗಿಯೇ ಹೇಳುತ್ತಾನೋ? ಹೌದು, ನಮಗೋಸ್ಕರ ಬರೆದದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುತ್ತದೆಂದು ಉಳುವದೂ, ಒಕ್ಕುವವನು ತನಗೆ ಪಾಲು ದೊರಕುತ್ತದೆಂದು ಒಕ್ಕುವದೂ ನ್ಯಾಯ.
Kannada Bible (KNCL) BSI 2016
ಇದನ್ನು ನಮ್ಮ ಹಿತಚಿಂತನೆಯಿಂದ ಹೇಳಲಾಗಿದೆ; ಅದೇ ಉದ್ದೇಶದಿಂದ ಬರೆಯಲಾಗಿದೆ. ಹೌದು, ಉಳುವವನೂ ಒಕ್ಕುವವನೂ ಕಾಳುಬೆಳೆಯಲ್ಲಿ ಪಾಲುಪಡೆಯುವ ಉದ್ದೇಶದಿಂದಲೇ ದುಡಿಯುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಶ್ಚಯವಾಗಿಯೂ, ದೇವರು ನಮಗೋಸ್ಕರ ಇವೆಲ್ಲವನ್ನು ಹೇಳುತ್ತಾರೆ ಅಲ್ಲವೇ? ಹೌದು, ಪವಿತ್ರ ವೇದವು ನಮಗೋಸ್ಕರವಾಗಿಯೇ ಬರೆಯಲಾಗಿದೆ. ಉಳುವವನು ಉಳುವಾಗ, ಒಕ್ಕುವವನು ಒಕ್ಕುವಾಗ ಸುಗ್ಗಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿಂದ ಹಾಗೆ ಮಾಡಬೇಕು.