1 Corinthians 9:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇತರ ಜನರು ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳದಿರಬಹುದು. ಆದರೆ ನೀವಂತೂ ಖಂಡಿತವಾಗಿ ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳುವಿರಿ. ನಾನು ಪ್ರಭುವಿನಲ್ಲಿ ಅಪೊಸ್ತಲನಾಗಿದ್ದೇನೆ ಎಂಬುದಕ್ಕೆ ನೀವೇ ಆಧಾರವಾಗಿದ್ದೀರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೋ ಅಪೊಸ್ತಲನಾಗಿದ್ದೇನೆ. ನಾನು ಕರ್ತನ ಅಪೊಸ್ತಲನಾಗಿದ್ದೇನೆಂಬುದಕ್ಕೆ ನೀವೇ ನನ್ನ ಮುದ್ರೆಯಾಗಿದ್ದಿರಿ.
Kannada BSI Bible 2016
ನಾನು ಅಪೊಸ್ತಲನಲ್ಲವೇ? ನಾನು ಸ್ವತಂತ್ರನಲ್ಲವೇ? ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಾನು ನೋಡಿದವನಲ್ಲವೇ? ಕರ್ತನಲ್ಲಿ ನೀವು ನನ್ನ ಕೆಲಸವಲ್ಲವೇ?
Kannada BSI JV (ಕನ್ನಡ ಸತ್ಯವೇದವು J.V. (BSI))
ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೂ ಅಪೊಸ್ತಲನಾಗಿದ್ದೇನೆ. ನಾನು ಅಪೊಸ್ತಲನಾಗಿದ್ದೇನೆಂಬದಕ್ಕೆ ಕರ್ತನಿಗೆ ಸೇರಿದವರಾದ ನೀವೇ ಪ್ರಮಾಣವಾಗಿದ್ದೀರಷ್ಟೆ.
Kannada Bible (KNCL) BSI 2016
ಇತರರಿಗೆ ನಾನು ಪ್ರೇಷಿತನಲ್ಲದಿದ್ದರೂ ನಿಮಗಂತೂ ನಾನು ಪ್ರೇಷಿತನೇ. ನಾನು ಪ್ರೇಷಿತನು ಎಂಬುದಕ್ಕೆ ಪ್ರಭುವಿಗೆ ಸೇರಿದವರಾದ ನೀವೇ ಜೀವಂತ ಸಾಕ್ಷಿಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗೆ ನಾನು ಅಪೊಸ್ತಲನಾಗಿದ್ದೇನೆ! ನನ್ನ ಅಪೊಸ್ತಲ ಸೇವೆಯ ಮುದ್ರೆಯು ಕರ್ತ ದೇವರಲ್ಲಿ ನೀವೇ ಆಗಿದ್ದೀರಷ್ಟೇ.