1 Corinthians 9:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೈನ್ಯದಲ್ಲಿ ಸೇವೆಮಾಡುವ ಯಾವ ಸೈನಿಕನಾದರೂ ತನಗೆ ತಾನೇ ಸಂಬಳವನ್ನು ಕೊಡುವುದಿಲ್ಲ. ಯಾವ ದ್ರಾಕ್ಷಿತೋಟಗಾರನಾಗಲಿ ತಾನು ಬೆಳೆದ ಹಣ್ಣಿನಲ್ಲಿ ಸ್ವಲ್ಪವನ್ನು ತಿನ್ನದೆ ಇರುವುದಿಲ್ಲ. ಹಸುಗಳನ್ನು ಸಾಕಿದ ಯಾವನೇ ಆಗಲಿ ಅವುಗಳ ಹಾಲಿನಲ್ಲಿ ಸ್ವಲ್ಪವನ್ನು ಕುಡಿಯದೆ ಇರುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಸೇವೆ ಮಾಡುವುದುಂಟೋ? ದ್ರಾಕ್ಷಾತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೇ ಇರುವುದುಂಟೋ? ತನ್ನ ಹಿಂಡನ್ನು ಸಾಕುವವನು ಅವುಗಳ ಹಾಲನ್ನು ಕುಡಿಯದೆ ಜೀವಿಸುವುದುಂಟೋ?
Kannada BSI Bible 2016
ಸ್ವಂತ ಖರ್ಚಿನಿಂದ ಯಾರಾದರೂ ಯಾವಾಗಲಾದರೂ ಯುದ್ಧಕ್ಕೆ ಹೋಗುವದುಂಟೇ? ದ್ರಾಕ್ಷೇ ತೋಟವನ್ನು ನೆಟ್ಟ ಯಾರಾದರೂ ಅದರ ಫಲವನ್ನು ತಿನ್ನದಿರುವ ದುಂಟೇ? ಇಲ್ಲವೆ ಮಂದೆಯನ್ನು ಮೇಯಿಸಿದ ಯಾರಾದರೂ ಮಂದೆಯ ಹೈನವನ್ನು ತಿನ್ನದಿರುವ ದುಂಟೇ?
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಯುದ್ಧಕ್ಕೆ ಹೋಗುವದುಂಟೇ? ದ್ರಾಕ್ಷೇತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೆ ಇರುವದುಂಟೋ? ಪಶುಗಳನ್ನು ಸಾಕಿದವನು ಅವುಗಳ ಹೈನಿನಿಂದ ಜೀವಿಸದೆ ಇರುವದುಂಟೋ?
Kannada Bible (KNCL) BSI 2016
ಯಾವ ಸೈನಿಕ ಸ್ವಂತ ಖರ್ಚಿನಿಂದ ಸಮರಕ್ಕೆ ನಿಲ್ಲುತ್ತಾನೆ? ಯಾವ ತೋಟಗಾರ ತನ್ನ ಸ್ವಂತ ದ್ರಾಕ್ಷಿಯ ತೋಟದಿಂದ ದ್ರಾಕ್ಷಿಯ ಫಲವನ್ನು ತಿನ್ನದಿರುತ್ತಾನೆ? ಯಾವ ಗೌಳಿಗ ತಾನು ಸಾಕಿದ ಹಸುವಿನ ಹಾಲನ್ನು ಕುಡಿಯದಿರುತ್ತಾನೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೈನಿಕ ಸೇವೆಯನ್ನು ಯಾವನಾದರೂ ಸ್ವಂತ ಖರ್ಚಿನಿಂದ ಮಾಡುವುದುಂಟೋ? ದ್ರಾಕ್ಷಿಯ ತೋಟವನ್ನು ಮಾಡಿ ಅದರ ಫಲವನ್ನು ತಿನ್ನದೇ ಇರುವವರುಂಟೋ? ಮಂದೆಯನ್ನು ಮೇಯಿಸುವವನು ಹಾಲನ್ನು ಕುಡಿಯದೇ ಇರುವುದುಂಟೋ?