1 Kings 1:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ರಾಜನೇ, ನನ್ನ ಮಗನಾದ ಸೊಲೊಮೋನನು ನಿನ್ನ ನಂತರದ ರಾಜನೆಂದು ನೀನು ನನಗೆ ವಾಗ್ದಾನ ಮಾಡಿದ್ದೆ. ಹೀಗಿರುವಾಗ ಅದೋನೀಯನು ನೂತನ ರಾಜನಾದದ್ದು ಏಕೆ?’ ಎಂದು ಹೇಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ಅರಸನು ತನ್ನ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು. ಅವನೇ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣ ಮಾಡಿ ಹೇಳಿದ್ದನಲ್ಲಾ. ಹೀಗಿದ್ದ ಮೇಲೆ ಅದೋನೀಯನು ಆಳುವುದೇಕೆ’ ಎಂದು ಕೇಳು.
Kannada BSI Bible 2016
ನೀನು ದಾವೀದನ ಬಳಿಗೆ ಹೋಗಿ ಅವ ನಿಗೆ--ಅರಸನಾದ, ನನ್ನ ಒಡೆಯನೇ, ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವದು ಯಾಕೆ ಎಂದು ಹೇಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ - ನನ್ನ ಒಡೆಯನಾದ ಅರಸನು ತನ್ನ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು; ಅವನೇ ತನ್ನ ಸಿಂಹಾಸನದ ಮೇಲೆ ಕೂತುಕೊಳ್ಳಬೇಕು ಎಂದು ತನ್ನ ದಾಸಿಯಾದ ನನಗೆ ಪ್ರಮಾಣಮಾಡಿ ಹೇಳಿದನಲ್ಲಾ! ಹೀಗಿದ್ದ ಮೇಲೆ ಅದೋನೀಯನು ಆಳುವದೇಕೆ ಎಂದು ಹೇಳು.
Kannada Bible (KNCL) BSI 2016
ನೀನು ಅರಸ ದಾವೀದನ ಬಳಿಗೆ ಹೋಗಿ, ‘ನನ್ನ ಒಡೆಯರಾದ ಅರಸರು ತಮ್ಮ ತರುವಾಯ ನನ್ನ ಮಗನಾದ ಸೊಲೊಮೋನನೇ ಆಳಬೇಕು, ಅವನೇ ತಮ್ಮ ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕು ಎಂದು ತಮ್ಮ ದಾಸಿಯಾದ ನನಗೆ ಪ್ರಮಾಣಮಾಡಿ ಹೇಳಿದಿರಲ್ಲವೇ? ಹೀಗಿದ್ದ ಮೇಲೆ ಅದೋನೀಯನು ಅರಸನಾದುದು ಹೇಗೆ?’ ಎಂದು ಕೇಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ಅರಸನಾದ ನನ್ನ ಒಡೆಯನೇ, “ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ, ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ,” ನೀವು ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವುದು ಏಕೆ?’ ಎಂದು ಕೇಳು.