1 Kings 1:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಅವನ ಸೇವಕರು ಅವನಿಗೆ, “ನಾವು ನಿನ್ನ ಆರೈಕೆಗಾಗಿ ಒಬ್ಬ ಯುವಕನ್ನಿಕೆಯನ್ನು ಹುಡುಕುವೆವು. ಅವಳು ನಿನ್ನನ್ನು ಒತ್ತರಿಸಿಕೊಂಡು ಮಲಗಿ ಬೆಚ್ಚಗಿಡುತ್ತಾಳೆ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದುದರಿಂದ ಅವನ ಸೇವಕರು ಅವನಿಗೆ, “ನಮ್ಮ ಒಡೆಯನಾದ ಅರಸನಿಗೋಸ್ಕರ ಒಬ್ಬ ಕನ್ಯೆಯನ್ನು ಹುಡುಕಿತರುವೆವು. ಆಕೆಯು ಅರಸನ ಸನ್ನಿಧಿಯಲ್ಲಿದ್ದುಕೊಂಡು ನಿನ್ನನ್ನು ಪರಾಂಬರಿಸಬೇಕು. ಆಕೆಯು ನಮ್ಮ ಒಡೆಯನಾದ ಅರಸನ ಪಕ್ಕದಲ್ಲಿ ಮಲಗುವುದರಿಂದ ನಿಮಗೆ ಬೆಚ್ಚಗಾಗುವುದು” ಎಂದು ಹೇಳಿದರು.
Kannada BSI Bible 2016
ಆದದರಿಂದ ಅವನ ಸೇವಕರು ಅವನಿಗೆ--ಅರಸನಾದ ನಮ್ಮ ಒಡೆಯನಿ ಗೋಸ್ಕರ ಕನ್ನಿಕೆಯನ್ನು ಹುಡುಕುವೆವು; ಅವಳು ಅರಸನ ಬಳಿಯಲ್ಲಿ ನಿಂತು ಅವನನ್ನು ಆದರಿಸಿ ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ ಅವನ ಮಗ್ಗುಲಲ್ಲಿ ಮಲಗಲಿ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದದರಿಂದ ಅವನ ಸೇವಕರು ಅವನಿಗೆ - ನಮ್ಮ ಒಡೆಯನಾದ ಅರಸನಿಗೋಸ್ಕರ ಒಬ್ಬ ಕನ್ಯೆಯನ್ನು ಹುಡುಕತಕ್ಕದ್ದು; ಆಕೆಯು ಅರಸನ ಸನ್ನಿಧಿಯಲ್ಲಿದ್ದುಕೊಂಡು ಅವನನ್ನು ಪರಾಂಬರಿಸಬೇಕು. ಆಕೆಯು ನಮ್ಮ ಒಡೆಯನಾದ ಅರಸನ ಮಗ್ಗುಲಲ್ಲಿ ಮಲಗುವದಾದರೆ ಅವನಿಗೆ ಬೆಚ್ಚಗಾಗುವದು ಎಂದು ಹೇಳಿ
Kannada Bible (KNCL) BSI 2016
ಆದುದರಿಂದ ಅವನ ಸೇವಕರು, “ಒಡೆಯರೇ, ಅರಸರೇ, ತಮ್ಮ ಸನ್ನಿಧಿಯಲ್ಲಿದ್ದುಕೊಂಡು ತಮಗೆ ಶುಶ್ರೂಷೆಮಾಡಲು ಒಬ್ಬ ಕನ್ನಿಕೆಯನ್ನು ಹುಡುಕಬೇಕಾಗಿದೆ. ಆಕೆ ನಮ್ಮ ಒಡೆಯರೂ ಅರಸರೂ ಆದ ತಮ್ಮ ಮಗ್ಗುಲಲ್ಲೇ ಮಲಗಿ ತಮ್ಮನ್ನು ಬೆಚ್ಚಗಿರಿಸುವಳು,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಅವನ ಸೇವಕರು ಅವನಿಗೆ, “ಅರಸ, ನಮ್ಮ ಒಡೆಯನಿಗೋಸ್ಕರ ಕನ್ನಿಕೆಯನ್ನು ಹುಡುಕುವೆವು. ಅವಳು ಅರಸನ ಬಳಿಯಲ್ಲಿ ನಿಂತು, ಅವನನ್ನು ಜೋಪಾನ ಮಾಡಲಿ. ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ, ಅವನ ಮಗ್ಗುಲಲ್ಲಿ ಅವಳು ಮಲಗಲಿ,” ಎಂದರು.