1 Kings 1:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಅವನು ನನ್ನನ್ನಾಗಲಿ ಯಾಜಕನಾದ ಚಾದೋಕನನ್ನಾಗಲಿ ಯೆಹೋಯಾದಾವನ ಮಗನಾದ ಬೆನಾಯನನ್ನಾಗಲಿ ನಿನ್ನ ಮಗನಾದ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಅವನು ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ ಎಂಬುವರನ್ನೂ ನಿನ್ನ ಮಗನೂ, ಸೇವಕನೂ ಸೊಲೊಮೋನನನ್ನೂ ಔತಣಕ್ಕೆ ಕರೆಯಲಿಲ್ಲ.
Kannada BSI Bible 2016
ಆದರೆ ನನ್ನನ್ನೂ ಅಂದರೆ ನಿನ್ನ ಸೇವಕನಾದ ನನ್ನನ್ನೂ ಯೆಹೋಯಾ ದಾವನ ಮಗನಾದ ಬೆನಾಯನನ್ನೂ ನಿನ್ನ ಸೇವಕನಾದ ಸೊಲೊಮೋನನನ್ನೂ ಅವನು ಕರೆಯಲೇ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅವನು ನಿನ್ನ ಸೇವಕನಾದ ನನ್ನನ್ನೂ ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ ಎಂಬವರನ್ನೂ ನಿನ್ನ ಸೇವಕನಾದ ಸೊಲೊಮೋನನನ್ನೂ ಔತಣಕ್ಕೆ ಕರೆಯಲಿಲ್ಲ.
Kannada Bible (KNCL) BSI 2016
ಆದರೆ ಅವನು ನಿಮ್ಮ ಸೇವಕನಾದ ನನ್ನನ್ನು, ಯಾಜಕ ಚಾದೋಕ್, ಯೆಹೋಯಾದಾವನ ಮಗ ಬೆನಾಯ ಎಂಬವರನ್ನು ಹಾಗು ನಿಮ್ಮ ಸೇವಕ ಸೊಲೊಮೋನನನ್ನು ಔತಣಕ್ಕೆ ಕರೆಯಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ನಿಮ್ಮ ಸೇವಕನಾದ ಸೊಲೊಮೋನನನ್ನೂ, ಅವನು ಕರೆಯಲೇ ಇಲ್ಲ.