1 Kings 1:45 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಂತರ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಗೀಹೋನ್ ಬುಗ್ಗೆಯ ಹತ್ತಿರ ಸೊಲೊಮೋನನನ್ನು ಅಭಿಷೇಕಿಸಿದರು. ಅನಂತರ ಅವರು ನಗರಕ್ಕೆ ಹೋದರು. ಅವರನ್ನು ಜನರು ಹಿಂಬಾಲಿಸಿದರು. ಈಗ ನಗರದ ಜನರು ತುಂಬಾ ಸಂತೋಷದಿಂದ ಇದ್ದಾರೆ. ಆ ಶಬ್ದವನ್ನೇ ನೀವು ಕೇಳುತ್ತಿರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಗೀಹೋನಿನ ಬಳಿಯಲ್ಲಿ ಅವನಿಗೆ ರಾಜ್ಯಾಭಿಷೇಕ ಮಾಡಿದರು. ಅಲ್ಲಿಂದ ಅವರು ಮಹಾ ಸಂತೋಷದಿಂದ ಜಯಘೋಷ ಮಾಡುತ್ತಾ ಪಟ್ಟಣಕ್ಕೆ ಬಂದಿದ್ದಾರೆ. ಇದರಿಂದಲೇ ಪಟ್ಟಣದಲ್ಲಿ ಗದ್ದಲವುಂಟಾಗಿದೆ. ನೀವು ಕೇಳಿದ ಶಬ್ದವು ಇದೇ.
Kannada BSI Bible 2016
ಅವರು ಅವನನ್ನು ಅರಸನ ಹೇಸರಕತ್ತೆಯ ಮೇಲೆ ಏರಿಸಿ ಯಾಜಕನಾದ ಚಾದೋಕನೂ ಪ್ರವಾದಿ ಯಾದ ನಾತಾನನೂ ಅವನನ್ನು ಗೀಹೋನಿನಲ್ಲಿ ಅರಸನಾಗಿರಲು ಅಭಿಷೇಕಿಸಿದ್ದಾರೆ; ಅವರು ಸಂತೋಷ ಪಡುತ್ತಾ ಅಲ್ಲಿಂದ ಬಂದ ಕಾರಣ ಪಟ್ಟಣವು ಗದ್ದಲ ವಾಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಗೀಹೋನಿನ ಬಳಿಯಲ್ಲಿ ಅವನಿಗೆ ರಾಜ್ಯಾಭಿಷೇಕಮಾಡಿದರು. ಅಲ್ಲಿಂದ ಅವರು ಮಹಾಸಂತೋಷದಿಂದ ಆರ್ಭಟಿಸುತ್ತಾ ಪಟ್ಟಣಕ್ಕೆ ಬಂದಿದ್ದಾರೆ. ಇದರಿಂದಲೇ ಪಟ್ಟಣದಲ್ಲಿ ಗದ್ದಲವುಂಟಾಗಿದೆ; ನೀವು ಕೇಳಿದ ಆರ್ಭಟವು ಇದೇ.
Kannada Bible (KNCL) BSI 2016
ಯಾಜಕ ಚಾದೋಕನೂ ಪ್ರವಾದಿ ನಾತಾನನೂ ಗೀಹೋನಿನ ಬಳಿಯಲ್ಲಿ ಅವನಿಗೆ ರಾಜಾಭಿಷೇಕ ಮಾಡಿದ್ದಾರೆ. ಅಲ್ಲಿಂದ ಅವರು ಹರ್ಷಾನಂದದಿಂದ ಆರ್ಭಟಿಸುತ್ತಾ ಪಟ್ಟಣಕ್ಕೆ ಬಂದಿದ್ದಾರೆ. ಇದರಿಂದಲೇ ಪಟ್ಟಣದಲ್ಲಿ ಗದ್ದಲವುಂಟಾಗಿದೆ; ನೀವು ಕೇಳಿದ ಆರ್ಭಟವು ಇದೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಸೊಲೊಮೋನನನ್ನು ಗೀಹೋನಿನಲ್ಲಿ ಅರಸನಾಗಿರಲು ಅಭಿಷೇಕಿಸಿದ್ದಾರೆ. ಅವರು ಸಂತೋಷಪಡುತ್ತಾ ಅಲ್ಲಿಂದ ಬಂದ ಕಾರಣ ಪಟ್ಟಣವು ಗದ್ದಲವಾಯಿತು. ನೀವು ಕೇಳುವ ಆರ್ಭಟವು ಇದೇ.