1 Kings 1:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನಾದ ದಾವೀದನ ಮಗನಾದ ಅದೋನೀಯನು ಬಹಳ ಗರ್ವಿಷ್ಠನಾದನು. ಅವನು, “ನಾನೇ ರಾಜನಾಗುತ್ತೇನೆ” ಎಂದು ಹೇಳಿಕೊಂಡನು. (ಅದೋನೀಯನ ತಾಯಿಯ ಹೆಸರು ಹಗ್ಗೀತ.) ಅದೋನೀಯನು ರಾಜನಾಗಬೇಕೆಂಬುದಾಗಿ ಬಹಳ ಆಸೆಪಟ್ಟನು. ಆದ್ದರಿಂದ ಅವನು ತನಗಾಗಿ ಒಂದು ರಥವನ್ನು, ಕುದುರೆಗಳನ್ನು ಮತ್ತು ರಥದ ಮುಂದೆ ಓಡುವಂತಹ ಐವತ್ತು ಜನರನ್ನು ಪಡೆದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆನಂತರ ಹಗ್ಗೀತಳ ಮಗನಾದ ಅದೋನೀಯನು, “ನಾನೇ ಅರಸನಾಗತಕ್ಕವನು” ಎಂಬುದಾಗಿ ಹೇಳಿ ಉಬ್ಬಿಕೊಂಡು, ತನಗೋಸ್ಕರ ರಥರಥಾಶ್ವಗಳನ್ನೂ, ಮುಂದೆ ಓಡುವುದಕ್ಕಾಗಿ ಐವತ್ತು ಸಿಪಾಯಿಗಳನ್ನೂ ನೇಮಿಸಿಕೊಂಡನು.
Kannada BSI Bible 2016
ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು--ನಾನೇ ಅರಸನಾಗಿರಬೇಕು ಅಂದುಕೊಂಡು ತನಗೋಸ್ಕರ ರಥಗಳನ್ನೂ ರಾಹುತ ರನ್ನೂ ತನ್ನ ಮುಂದೆ ಓಡುವದಕ್ಕೆ ಐವತ್ತು ಮಂದಿ ಮನುಷ್ಯರನ್ನೂ ಸಿದ್ಧಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಗ್ಗೀತಳ ಮಗನಾದ ಅದೋನೀಯನು ನಾನೇ ಅರಸನಾಗತಕ್ಕವನು ಎಂಬದಾಗಿ ಉಬ್ಬಿಕೊಂಡು ತನಗೋಸ್ಕರ ರಥರಥಾಶ್ವಗಳನ್ನೂ ಮುಂದೆ ಓಡುವದಕ್ಕಾಗಿ ಐವತ್ತು ಮಂದಿ ಸಿಪಾಯಿಗಳನ್ನೂ ಇಟ್ಟುಕೊಂಡನು.
Kannada Bible (KNCL) BSI 2016
ಈಗಾಗಲೇ ಅಬ್ಷಾಲೋಮನು ಸತ್ತುಹೋಗಿದ್ದನು. ದಾವೀದನಿಗೆ ಹಗ್ಗೀತಳಲ್ಲಿ ಹುಟ್ಟಿದ ಅದೋನಿಯನೇ ಜೀವದಿಂದ ಉಳಿದವರಲ್ಲಿ ಹಿರಿಯ ಮಗ. ಅವನು ಬಹಳ ಸುಂದರನು. ದಾವೀದನು ಯಾವುದೇ ವಿಷಯದಲ್ಲಿ ಅವನನ್ನು ಎಂದೂ ಗದರಿಸಿರಲಿಲ್ಲ. ತಾನೇ ರಾಜನಾಗಬೇಕೆಂಬ ಆಕಾಂಕ್ಷೆ ಅವನದು. ಎಂದೇ ತನಗೋಸ್ಕರ ರಥ, ರಥಾಶ್ವಗಳನ್ನು ಹಾಗು ಐವತ್ತು ಮಂದಿ ಬೆಂಗಾವಲಿಗರನ್ನು ನೇಮಿಸಿಕೊಂಡಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು, “ನಾನು ಅರಸನಾಗಿರಬೇಕು,” ಎಂದುಕೊಂಡು, ತನಗೋಸ್ಕರ ರಥಗಳನ್ನೂ, ಸಾರಥಿಯರನ್ನೂ, ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿ ಪುರುಷರನ್ನೂ ಸಿದ್ಧಮಾಡಿದನು.