1 Kings 10:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರಾಜನ ಮೇಜಿನ ಮೇಲಿದ್ದ ಆಹಾರವನ್ನೂ ಒಟ್ಟಾಗಿ ಸೇರಿಬರುತ್ತಿದ್ದ ಅವನ ಅಧಿಕಾರಿಗಳನ್ನೂ ಅರಮನೆಯಲ್ಲಿದ್ದ ಸೇವಕರನ್ನೂ ಮತ್ತು ಅವರು ಧರಿಸಿದ್ದ ಉತ್ತಮ ಬಟ್ಟೆಗಳನ್ನೂ ಅವಳು ನೋಡಿದಳು. ಅವನ ಔತಣಕೂಟಗಳನ್ನೂ ಅವನು ಆಲಯದಲ್ಲಿ ಅರ್ಪಿಸುತ್ತಿದ್ದ ಯಜ್ಞಗಳನ್ನೂ ಅವಳು ನೋಡಿದಳು. ಇವುಗಳಿಂದ ಅವಳಿಗೆ ನಿಜವಾಗಿಯೂ ‘ಉಸಿರುಕಟ್ಟಿಸುವಂತಹ’ ವಿಸ್ಮಯವಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಮತ್ತು ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಹೋದಳು.
Kannada BSI Bible 2016
ಅವನ ಮೇಜಿನ ಭೋಜನವನ್ನೂ ದಾಸರ ಕೂತಿರುವಿಕೆಯ ರೀತಿಯನ್ನೂ ಸೇವಕರು ನಿಂತಿರುವದನ್ನೂ ಅವರ ವಸ್ತ್ರಗಳನ್ನೂ ಅವನ ಪಾನ ದಾಯಕರನ್ನೂ ಅವನು ಕರ್ತನ ಮಂದಿರಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಸ್ತಬ್ಧಳಾದಳು; ಅವಳು ಅರಸನಿಗೆ--
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಅರಸನಿಗೆ -
Kannada Bible (KNCL) BSI 2016
ಅವನು ಕಟ್ಟಿಸಿದ ಅರಮನೆ, ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನು ಮತ್ತು ಸರ್ವೇಶ್ವರನ ಆಲಯದಲ್ಲಿ ಅವನು ಸಮರ್ಪಿಸುತ್ತಿದ್ದ ದಹನಬಲಿಗಳನ್ನು ನೋಡಿದಳು. ಇವುಗಳಿಂದ ಆಶ್ಚರ್ಯಚಕಿತಳಾಗಿ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.