1 Kings 11:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಸಮಯದಲ್ಲಿ ಸೊಲೊಮೋನನಿಗೆ ಶತ್ರುವಾಗುವಂತೆ ಎದೋಮ್ಯನಾದ ಹದದನನ್ನು ಯೆಹೋವನು ಪ್ರೇರೇಪಿಸಿದನು. ಹದದನು ರಾಜನಾದ ಎದೋಮ್ಯನ ವಂಶದವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಎದೋಮ್ಯನೂ, ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರುದ್ಧವಾಗಿ ಎಬ್ಬಿಸಿದನು.
Kannada BSI Bible 2016
ಆಗ ಕರ್ತನು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಶತ್ರುವಾಗಿರಲು ಎಬ್ಬಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಎದೋಮ್ಯನೂ ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರೋಧವಾಗಿ ಏಳಮಾಡಿದನು.
Kannada Bible (KNCL) BSI 2016
ಎದೋಮ್ಯನೂ ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರುದ್ಧ ದಂಗೆಯೇಳುವಂತೆ ಮಾಡಿದರು ಸರ್ವೇಶ್ವರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೋವ ದೇವರು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಎದುರಾಳಿಯಾಗಿ ಎಬ್ಬಿಸಿದರು.