1 Kings 11:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ನಾದಿನಿಯನ್ನೇ ಹದದನಿಗೆ ಪತ್ನಿಯನ್ನಾಗಿ ಕೊಟ್ಟನು. (ರಾಣಿಯಾದ ತಖ್ಪೆನೇಸಳು ಫರೋಹನ ಪತ್ನಿ.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹದದನು ಫರೋಹನ ವಿಶೇಷ ದಯೆಗೆ ಪಾತ್ರನಾದುದರಿಂದ ಫರೋಹನನು ತನ್ನ ಹೆಂಡತಿಯೂ ರಾಣಿಯೂ ಆದ ತಖ್ಪೆನೇಸ್ ಎಂಬಾಕೆಯ ತಂಗಿಯನ್ನು ಅವನಿಗೆ ಮದುವೆಮಾಡಿಕೊಟ್ಟನು.
Kannada BSI Bible 2016
ಇದಲ್ಲದೆ ಹದದನು ಫರೋಹನ ದೃಷ್ಟಿಯಲ್ಲಿ ಅತಿ ಕೃಪೆಯನ್ನು ಹೊಂದಿ ದನು. ಏನಂದರೆ, ಅವನು ರಾಣಿಯಾಗಿರುವ ತನ್ನ ಹೆಂಡತಿಯಾದ ತಖ್ಪೆನೇಸ್‌ಯೆಂಬವಳ ಸಹೋ ದರಿಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹದದನು ಫರೋಹನ ವಿಶೇಷ ದಯೆಗೆ ಪಾತ್ರನಾದದರಿಂದ ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಖ್ಪೆನೇಸ್ ಎಂಬಾಕೆಯ ತಂಗಿಯನ್ನು ಇವನಿಗೆ ಮದುವೆಮಾಡಿ ಕೊಟ್ಟನು.
Kannada Bible (KNCL) BSI 2016
ಹದದನು ಫರೋಹನ ವಿಶೇಷ ದಯೆಗೆ ಪಾತ್ರನಾದನು. ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಖ್ಪೆನೇಸ್ ಎಂಬಾಕೆಯ ತಂಗಿಯನ್ನು ಇವನಿಗೆ ಮದುವೆ ಮಾಡಿಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಪ್ನೆಸ್ ಎಂಬವಳ ಸಹೋದರಿಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.