1 Kings 11:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಫರೋಹನು “ನಿನಗೆ ಬೇಕಾದುದ್ದೆಲ್ಲವನ್ನು ನಾನು ಇಲ್ಲಿ ನಿನಗೆ ಕೊಟ್ಟಿದ್ದೇನೆ! ನೀನು ಸ್ವದೇಶಕ್ಕೆ ಹಿಂದಿರುಗಿ ಹೋಗಲು ಅಪೇಕ್ಷಿಸುತ್ತಿರುವುದಾದರೂ ಏಕೆ?” ಎಂದು ಕೇಳಿದನು. ಹದದನು, “ದಯವಿಟ್ಟು ನನ್ನ ಮನೆಗೆ ನಾನು ಹೋಗಲು ಬಿಡು” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫರೋಹನು ಅವನನ್ನು, “ನನ್ನ ಬಳಿಯಲ್ಲಿ ನೀನಗೇನು ಕೊರತೆಯಾಯಿತು. ಸ್ವದೇಶಕ್ಕೆ ಹೋಗಬೇಕೆಂದು ಯಾಕೆ ಬಯಸುತ್ತೀ?” ಎಂದು ಕೇಳಿದನು. ಅದಕ್ಕೆ ಹದದನು, “ಏನೂ ಕೊರತೆಯಾಗಿರುವುದಿಲ್ಲ. ಆದರೂ ನನಗೆ ಹೋಗುವುದಕ್ಕೆ ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು.
Kannada BSI Bible 2016
ಫರೋಹನು ಅವನಿಗೆ -- ಯಾಕೆ? ಇಗೋ, ನೀನು ನಿನ್ನ ದೇಶಕ್ಕೆ ಹೋಗಬೇಕೆಂಬುವ ಹಾಗೆ ನೀನು ನನ್ನ ಸಂಗಡ ಇರುವಾಗ ನಿನಗೆ ಏನು ಕೊರತೆಯಾಯಿತು ಅಂದಾಗ ಅವನು--ಏನೂ ಇಲ್ಲ; ಆದರೆ ಹೇಗಾದರೂ ನಾನು ಅಲ್ಲಿಗೆ ಹೋಗುತ್ತೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫರೋಹನು ಅವನನ್ನು - ನನ್ನ ಬಳಿಯಲ್ಲಿ ನಿನಗೇನು ಕೊರತೆಯಾಯಿತು? ಸ್ವದೇಶಕ್ಕೆ ಹೋಗಬೇಕೆಂದು ಯಾಕೆ ಆಶಿಸುತ್ತೀ ಎಂದು ಕೇಳಲು ಅವನು - ಏನೂ ಕೊರತೆಯಾಗಿರುವದಿಲ್ಲ; ಆದರೂ ನನಗೆ ಹೋಗುವದಕ್ಕೆ ಅಪ್ಪಣೆಯಾಗಬೇಕು ಎಂದು ಉತ್ತರಕೊಟ್ಟನು.
Kannada Bible (KNCL) BSI 2016
ಫರೋಹನು, “ನನ್ನ ಬಳಿಯಲ್ಲಿ ನಿನಗೇನು ಕೊರತೆಯಾಯಿತು? ಸ್ವದೇಶಕ್ಕೆ ಹೋಗಬೇಕೆಂದು ಏಕೆ ಆಶಿಸುತ್ತಿ?” ಎಂದು ಕೇಳಿದನು. ಅವನು, “ಏನೂ ಕೊರತೆಯಾಗಿಲ್ಲ; ಆದರೂ ನನಗೆ ಹೋಗುವುದಕ್ಕೆ ಅಪ್ಪಣೆಯಾಗಬೇಕು,” ಎಂದು ಉತ್ತರಕೊಟ್ಟನು. ಹದದನು ತನ್ನ ಊರಿಗೆ ಮರಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಫರೋಹನು ಅವನಿಗೆ, “ನೀನು ನಿನ್ನ ದೇಶಕ್ಕೆ ಹೋಗಬೇಕೆನ್ನುವ ಹಾಗೆ ನಿನಗೆ ನನ್ನ ಸಂಗಡ ಇರುವಾಗ ಏನು ಕೊರತೆಯಾಯಿತು?” ಎಂದು ಕೇಳಿದನು. ಅವನು, “ಏನೂ ಇಲ್ಲ, ಆದರೆ ನಾನು ಅಲ್ಲಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದನು.