1 Kings 11:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನಿಗೆ ವಿರುದ್ಧವಾಗಿ ಶತ್ರುವಾಗುವಂತೆ ಇನ್ನೊಬ್ಬ ಮನುಷ್ಯನನ್ನೂ ದೇವರು ಪ್ರೇರೇಪಿಸಿದನು. ಈ ಮನುಷ್ಯನು ಎಲ್ಯಾದಾವನ ಮಗನಾದ ರೆಜೋನ್ ಎಂಬವನು. ರೆಜೋನನು ತನ್ನ ಒಡೆಯನ ಹತ್ತಿರದಿಂದ ಓಡಿಹೋಗಿದ್ದನು. ಚೋಬದ ರಾಜನಾದ ಹದದೆಜೆರನು ಅವನ ಒಡೆಯ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರು ಸೊಲೊಮೋನನಿಗೆ ವಿರೋಧವಾಗಿ ಎಬ್ಬಿಸಿದ ಎರಡನೆಯ ವೈರಿಯು ಎಲ್ಯಾದಾವನ ಮಗನಾದ ರೆಜೋನ್ ಎಂಬುವನು.
Kannada BSI Bible 2016
ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಅವನ ಮೇಲೆ ಎಬ್ಬಿಸಿದನು. ಅವನು ಯಾರಂದರೆ ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೇಜರ ನನ್ನು ಬಿಟ್ಟು ಓಡಿಹೋದ ಎಲ್ಯದಾವನ ಮಗನಾದ ರೆಜೋನನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರು ಸೊಲೊಮೋನನಿಗೆ ವಿರೋಧವಾಗಿ ಎಬ್ಬಿಸಿದ ಎರಡನೆಯ ವೈರಿಯು ಎಲ್ಯಾದಾವನ ಮಗನಾದ ರೆಜೋನ್ ಎಂಬವನು.
Kannada Bible (KNCL) BSI 2016
ಸೊಲೊಮೋನನಿಗೆ ವಿರುದ್ಧ ದೇವರು ಎಬ್ಬಿಸಿದ ಎರಡನೆಯ ವೈರಿ ಎಲ್ಯಾದಾವನ ಮಗ ರೆಜೋನ್ ಎಂಬವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಸೊಲೊಮೋನನ ಮೇಲೆ ಎಬ್ಬಿಸಿದರು. ಅವನು ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೆಜೆರನನ್ನು ಬಿಟ್ಟು ಓಡಿ ಹೋದ ಎಲ್ಯಾದಾವನ ಮಗನಾದ ರೆಜೋನನು.