1 Kings 11:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾರೊಬ್ಬಾಮನು ಸಮರ್ಥನಾದ ಮನುಷ್ಯನಾಗಿದ್ದನು. ಈ ಯುವಕನು ಒಳ್ಳೆಯ ಕೆಲಸಗಾರನೆಂಬುದು ಸೊಲೊಮೋನನಿಗೆ ತಿಳಿಯಿತು. ಆದ್ದರಿಂದ ಸೊಲೊಮೋನನು ಯೋಸೇಫ್ ಕುಲದ ಕೆಲಸಗಾರರೆಲ್ಲರಿಗೂ ಮೇಲ್ವಿಚಾರಕನನ್ನಾಗಿ ಅವನನ್ನು ನೇಮಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೌವನಸ್ಥನಾದ ಯಾರೊಬ್ಬಾಮನು ಬಹು ಸಾಮರ್ಥ್ಯದಿಂದ ಕೆಲಸಮಾಡುತ್ತಿರುವುದನ್ನು ಕಂಡು ಅವನನ್ನು ಯೋಸೇಫ್ಯರ ಎಲ್ಲಾ ಆಳುಗಳ ಮೇಲೆ ಮೇಸ್ತ್ರಿಯನ್ನಾಗಿ ನೇಮಿಸಿದನು.
Kannada BSI Bible 2016
ಯಾರೊಬ್ಬಾಮನು ಪರಾಕ್ರಮ ಶಾಲಿಯಾಗಿರುವದರಿಂದ ಸೊಲೊಮೋನನು--ಈ ಯೌವನಸ್ಥನು ಕೆಲಸ ಮಾಡತಕ್ಕವನೆಂದು ನೋಡಿ ಯೋಸೇಫನ ಮನೆಯ ಸಮಸ್ತ ಕಾರ್ಯಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೌವನಸ್ಥನಾದ ಯಾರೊಬ್ಬಾಮನು ಬಹುಸಾಮರ್ಥ್ಯದಿಂದ ಕೆಲಸಮಾಡುತ್ತಿರುವದನ್ನು ಕಂಡು ಅವನನ್ನು ಯೋಸೇಫ್ಯರ ಎಲ್ಲಾ ಆಳುಗಳ ಮೇಲೆ ಮೇಸ್ತ್ರಿಯನ್ನಾಗಿ ನೇವಿುಸಿದನು.
Kannada Bible (KNCL) BSI 2016
ಯೌವನಸ್ಥನಾದ ಯಾರೊಬ್ಬಾಮನು ಬಹುಸಾಮರ್ಥ್ಯದಿಂದ ಕೆಲಸಮಾಡುತ್ತಿರುವುದನ್ನು ಕಂಡು ಅವನನ್ನು ಜೋಸೆಫ್ಯರ ಎಲ್ಲಾ ಆಳುಗಳ ಮೇಲೆ ಮೇಸ್ತ್ರಿಯನ್ನಾಗಿ ನೇಮಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾರೊಬ್ಬಾಮನು ಪರಾಕ್ರಮಶಾಲಿಯಾಗಿರುವುದರಿಂದ ಸೊಲೊಮೋನನು ಈ ಪ್ರಾಯಸ್ಥನು ಕೆಲಸಮಾಡತಕ್ಕವನೆಂದು ಕಂಡು, ಯೋಸೇಫನ ಗೋತ್ರದ ಸಮಸ್ತ ಆಳುಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು.