1 Kings 11:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನು ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದ ಕಾರಣ ನಾನು ಅವನ ರಾಜ್ಯವನ್ನು ಅವನಿಂದ ತೆಗೆದುಕೊಳ್ಳುವೆನು. ಅವನು ಚೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ ಮೋವಾಬ್ಯರ ದೇವರಾದ ಕೆಮೋಷನನ್ನೂ ಅಮ್ಮೋನಿಯರ ದೇವರಾದ ಮಿಲ್ಕೋಮನನ್ನೂ ಪೂಜಿಸಿದನು. ಸೊಲೊಮೋನನು ತಾನು ಮಾಡುತ್ತಿದ್ದ ಸರಿಯಾದ ಮತ್ತು ಉತ್ತಮವಾದ ಕಾರ್ಯಗಳನ್ನು ನಿಲ್ಲಿಸಿದನು. ಅವನು ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಲಿಲ್ಲ. ತನ್ನ ತಂದೆಯಾದ ದಾವೀದನು ಜೀವಿಸಿದಂತೆ ಅವನು ಜೀವಿಸುತ್ತಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಆತನು ನಿನಗೆ, “ಸೊಲೊಮೋನನೂ ಅವರ ಮನೆಯವರೂ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ‘ಕೆಮೋಷ್’ ಮತ್ತು ಅಮ್ಮೋನಿಯರ ‘ಮಿಲ್ಕೋಮ್’ ಇವುಗಳನ್ನು ಆರಾಧಿಸಿದ್ದೂ ಮತ್ತು ಅವರ ತಂದೆಯಾದ ದಾವೀದನು ನನ್ನ ನೇಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆ ಹೋದದ್ದೇ ಇದಕ್ಕೆ ಕಾರಣ.
Kannada BSI Bible 2016
ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಕೈಕೊಳ್ಳು ವದಕ್ಕೂ ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡು ವದಕ್ಕೂ ಅವರು ನನ್ನ ಮಾರ್ಗಗಳಲ್ಲಿ ನಡೆಯದೆ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋ ರೆತನ್ನೂ ಮೋವಾಬ್ಯರ ದೇವರಾದ ಕೆಮೋಷನ್ನೂ ಅಮ್ಮೋನನ ಮಕ್ಕಳ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಆತನು ನಿನಗೆ - ಸೊಲೊಮೋನನೂ ಅವನ ಮನೆಯವರೂ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ಕೆಮೋಷ್, ಅಮ್ಮೋನಿಯರ ದೇವತೆಯಾದ ವಿುಲ್ಕೋಮ್ ಇವುಗಳನ್ನು ಆರಾಧಿಸಿದ್ದೂ ಅವರ ತಂದೆಯಾದ ದಾವೀದನು ನನ್ನ ನೇಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡಿಯದೆ ಹೋದದ್ದೂ ಇದಕ್ಕೆ ಕಾರಣ.
Kannada Bible (KNCL) BSI 2016
ಇದಲ್ಲದೆ, ಅವರು ನಿನಗೆ, ‘ಸೊಲೊಮೋನನೂ ಅವನ ಮನೆಯವರೂ ನನ್ನನ್ನು ಬಿಟ್ಟು ಸಿದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ಕೆಮೋಷ್, ಅಮ್ಮೋನಿಯರ ದೇವತೆಯಾದ ಮಿಲ್ಕೋಮ್ ಇವುಗಳನ್ನು ಆರಾಧಿಸುತ್ತಿದ್ದಾರೆ. ಅವರ ತಂದೆ ದಾವೀದನು ನನ್ನ ನಿಯಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆಹೋದದ್ದೂ ಇದಕ್ಕೆ ಕಾರಣ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ, ನನ್ನ ನ್ಯಾಯಗಳನ್ನೂ ಕೈಗೊಳ್ಳುವುದಕ್ಕೂ, ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡುವುದಕ್ಕೂ, ಸೊಲೊಮೋನನೂ ಅವನ ಮನೆಯವರೂ ನನ್ನ ಮಾರ್ಗಗಳಲ್ಲಿ ನಡೆಯದೆ, ನನ್ನನ್ನು ಬಿಟ್ಟು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಮೋವಾಬ್ಯರ ದೇವರಾದ ಕೆಮೋಷನ್ನೂ, ಅಮ್ಮೋನಿಯರ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ.