1 Kings 12:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಹಿರಿಯರು, “ಇಂದು ನೀನು ಅವರಿಗೆ ಸೇವಕನಂತೆ ಇರುವುದಾದರೆ, ಅವರು ನಿನ್ನ ಸೇವೆಯನ್ನು ನಿಜವಾಗಿಯೂ ಮಾಡುತ್ತಾರೆ. ನೀನು ಅವರೊಂದಿಗೆ ಕರುಣೆಯಿಂದ ಮಾತಾಡಿದರೆ, ಅವರು ಎಂದೆಂದಿಗೂ ನಿನಗಾಗಿ ದುಡಿಯುತ್ತಾರೆ” ಎಂದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಅವನಿಗೆ, “ನೀನು ಈ ಹೊತ್ತು ಈ ಜನರ ಮಾತನ್ನು ಕೇಳಿ, ಅವರಿಗೆ ವಿನಯವಾಗಿ ಒಳ್ಳೆಯ ಉತ್ತರ ಕೊಡುವುದಾದರೆ ಅವರು ಯಾವಾಗಲೂ ನಿನ್ನ ಸೇವಕರಾಗಿರುವರು” ಎಂದರು.
Kannada BSI Bible 2016
ಅವರು ಅವನಿಗೆ--ನೀನು ಇಂದು ಈ ಜನರಿಗೆ ಸೇವಕನಾಗಿ ಅವರನ್ನು ಸೇವಿಸಿ ಒಳ್ಳೇ ಮಾತುಗಳಿಂದ ಅವರಿಗೆ ಪ್ರತ್ಯುತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು ಎಂದು ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಅವನಿಗೆ - ನೀನು ಈ ಹೊತ್ತು ಈ ಜನರ ಮಾತನ್ನು ಕೇಳಿ ಅವರಿಗೆ ಒಳಗಾಗಿ ಒಳ್ಳೇ ಉತ್ತರಕೊಡುವದಾದರೆ ಅವರು ಯಾವಾಗಲೂ ನಿನಗೆ ಒಳಗಾಗಿರುವರು ಅಂದರು.
Kannada Bible (KNCL) BSI 2016
ಅವರು, “ನೀವು ಈ ದಿನ ಜನರ ಮಾತನ್ನು ಕೇಳಿ ಅವರಿಗೆ ವಿನಯರಾಗಿ, ಒಳ್ಳೆಯ ಉತ್ತರಕೊಟ್ಟರೆ ಅವರು ಯಾವಾಗಲೂ ನಿಮಗೆ ಅಧೀನರಾಗಿರುವರು,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಅವನಿಗೆ, “ನೀನು ಇಂದು ಈ ಜನರಿಗೆ ಸೇವಕನಾಗಿ ಅವರನ್ನು ಸೇವಿಸಿ, ಒಳ್ಳೆಯ ಮಾತುಗಳಿಂದ ಅವರಿಗೆ ಉತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು,” ಎಂದು ಹೇಳಿದರು.