1 Kings 13:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ವಯಸ್ಸಾದ ಪ್ರವಾದಿಯು, “ಅವನು ಬಿಟ್ಟುಹೋಗುವಾಗ ಯಾವ ರಸ್ತೆಯಲ್ಲಿ ಹೋದನು?” ಎಂದು ಕೇಳಿದನು. ಯೆಹೂದ ದೇಶದವನಾದ ದೇವಮನುಷ್ಯನು ಯಾವ ರಸ್ತೆಯಲ್ಲಿ ಹಿಂದಿರುಗಿ ಹೋದನೆಂಬುದನ್ನು ಅವನ ಮಕ್ಕಳು ತಂದೆಗೆ ತೋರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಂದೆಯು ಅವರನ್ನು, “ಅವನು ಯಾವ ದಾರಿಯಿಂದ ಹೋದನು?” ಎಂದು ಕೇಳಲು ಅವರು ಯೆಹೂದ ದೇಶದವನಾದ ಆ ದೇವರ ಮನುಷ್ಯನು ಹೋದ ದಾರಿಯನ್ನು ತೋರಿಸಿದರು.
Kannada BSI Bible 2016
ಅವನು ಅರಸನಿಗೆ ಹೇಳಿದ ಮಾತುಗಳನ್ನು ಸಹ ತಮ್ಮ ತಂದೆಗೆ ತಿಳಿಸಿದರು. ಆಗ ಅವರ ತಂದೆ ಅವ ರಿಗೆ--ಅವನು ಯಾವ ಮಾರ್ಗವಾಗಿ ಹೋದನು ಅಂದನು. ಯಾಕಂದರೆ ಯೆಹೂದದಿಂದ ಬಂದ ದೇವರ ಮನುಷ್ಯನು ಹೋದ ಮಾರ್ಗವನ್ನು ಅವನ ಮಕ್ಕಳು ನೋಡಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಂದೆಯು ಅವರನ್ನು - ಅವನು ಯಾವ ದಾರಿಯಿಂದ ಹೋದನು ಎಂದು ಕೇಳಲು ಅವರು ಯೆಹೂದ ದೇಶದವನಾದ ಆ ದೇವರ ಮನುಷ್ಯನು ಹೋದ ದಾರಿಯನ್ನು ತೋರಿಸಿದರು.
Kannada Bible (KNCL) BSI 2016
“ಅವನು ಯಾವ ದಾರಿಯಿಂದ ಹೋದ?” ಎಂದು ತಂದೆ ಅವರನ್ನು ಕೇಳಲು, ಅವರು ಜುದೇಯ ನಾಡಿನ ಆ ದೈವಭಕ್ತ ಹೋದ ದಾರಿಯನ್ನು ತೋರಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರ ತಂದೆ ಅವರಿಗೆ, “ಅವನು ಯಾವ ಮಾರ್ಗವಾಗಿ ಹೋದನು,” ಎಂದನು. ಯೆಹೂದದಿಂದ ಬಂದ ದೇವರ ಮನುಷ್ಯನು ಹೋದ ಮಾರ್ಗವನ್ನು ಅವನ ಮಕ್ಕಳಿಗೆ ತೋರಿಸಿದರು.