1 Kings 13:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಜ್ಞವೇದಿಕೆಯ ವಿರುದ್ಧ ಮಾತನಾಡುವಂತೆ ಆ ದೇವಮನುಷ್ಯನಿಗೆ ಯೆಹೋವನು ಆಜ್ಞಾಪಿಸಿದನು. ಆಗ ಅವನು ಹೇಳಿದ್ದೇನೆಂದರೆ: “ಯಜ್ಞವೇದಿಕೆಯೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ: ‘ದಾವೀದನ ವಂಶದಲ್ಲಿ ಯೋಷೀಯನೆಂಬ ಮಗನು ಹುಟ್ಟುವನು. ಈಗ ಈ ಪೂಜಾಸ್ಥಳಗಳಲ್ಲಿ ಧೂಪಸುಡುತ್ತಿರುವ ಈ ಯಾಜಕರನ್ನು ಅವನು ಹಿಡಿದು ಅವರನ್ನು ನಿನ್ನ ಮೇಲೆಯೇ ಕೊಲ್ಲುವನು; ಈಗ ನಿನ್ನ ಮೇಲೆ ಧೂಪಸುಡುತ್ತಿರುವ ಯಾಜಕರನ್ನು ಅವನು ಹಿಡಿದು ಅವರ ಮೂಳೆಗಳನ್ನು ನಿನ್ನ ಮೇಲೆ ಸುಡುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಆ ಮನುಷ್ಯನು ಯೆಹೋವನ ಅಪ್ಪಣೆಯಿಂದ ಯಜ್ಞವೇದಿಯನ್ನು ಕುರಿತು, “ವೇದಿಯೇ, ವೇದಿಯೇ, ದಾವೀದನ ಸಂತಾನದಲ್ಲಿ ಯೋಷೀಯನು ಎಂಬ ಒಬ್ಬ ಮನುಷ್ಯನು ಹುಟ್ಟುವನು. ಅವನು ನಿನ್ನ ಮೇಲೆ ಧೂಪಹಾಕುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು, ಅವರನ್ನು ನಿನ್ನ ಮೇಲೆಯೇ ಯಜ್ಞಮಾಡುವನು. ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವು ಎಂದು ಯೆಹೋವನು ಹೇಳುತ್ತಾನೆ” ಅಂದನು.
Kannada BSI Bible 2016
ಅವನು ಆ ಪೀಠಕ್ಕೆ ವಿರೋಧವಾಗಿ ಕರ್ತನ ಮಾತಿನಲ್ಲಿ ಕೂಗಿ--ಪೀಠವೇ, ಪೀಠವೇ, ಇಗೋ, ದಾವೀದನ ಸಂತಾನದಲ್ಲಿ ಯೋಷೀಯನೆಂದು ಹೆಸರುಳ್ಳ ಒಬ್ಬ ಕುಮಾರನು ಹುಟ್ಟುವನು; ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಉನ್ನತ ಸ್ಥಳಗಳ ಯಾಜಕರನ್ನು ಬಲಿಯಾಗಿ ಅರ್ಪಿಸುವನು; ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವೆಂದು ಕರ್ತನು ಹೇಳುತ್ತಾನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಮನುಷ್ಯನು ಯೆಹೋವನ ಅಪ್ಪಣೆಯಿಂದ ವೇದಿಯನ್ನು ಕುರಿತು - ವೇದಿಯೇ, ವೇದಿಯೇ, ದಾವೀದನ ಸಂತಾನದಲ್ಲಿ ಯೋಷೀಯನು ಎಂಬೊಬ್ಬನು ಹುಟ್ಟುವನು; ಅವನು ನಿನ್ನ ಮೇಲೆ ಧೂಪಸುಡುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಅವರನ್ನು ನಿನ್ನ ಮೇಲೆಯೇ ಯಜ್ಞಮಾಡುವನು. ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವು ಎಂದು ಯೆಹೋವನು ಹೇಳುತ್ತಾನೆ ಅಂದನು.
Kannada Bible (KNCL) BSI 2016
ಆ ಭಕ್ತನು ಸರ್ವೇಶ್ವರನ ಅಪ್ಪಣೆಯಿಂದ ಆ ಪೀಠವನ್ನು ಉದ್ದೇಶಿಸಿ, “ಎಲೈ ಪೀಠವೇ, ಪೀಠವೇ, ದಾವೀದನ ಸಂತಾನದಲ್ಲಿ ಯೋಷೀಯ ಎಂಬೊಬ್ಬನು ಹುಟ್ಟುವನು. ಅವನು, ನಿನ್ನ ಮೇಲೆ ಧೂಪಸುಡುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು, ಅವರನ್ನು ನಿನ್ನ ಮೇಲೆಯೇ ಬಲಿಕೊಡುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವುದು ಎಂದು ಸರ್ವೇಶ್ವರ ಹೇಳುತ್ತಾರೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಯೆಹೋವ ದೇವರ ಅಪ್ಪಣೆಯಿಂದ ಆ ಪೀಠವನ್ನು ಕುರಿತು: “ಪೀಠವೇ, ಪೀಠವೇ! ದಾವೀದನ ಸಂತಾನದಲ್ಲಿ ಯೋಷೀಯ ಎಂಬ ಹೆಸರುಳ್ಳ ಒಬ್ಬ ಮಗನು ಹುಟ್ಟುವನು. ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಬಲಿಯಾಗಿ ಅರ್ಪಿಸುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವವು,” ಎಂದು ಯೆಹೋವ ದೇವರು ಹೇಳುತ್ತಾರೆ ಎಂದನು.