1 Kings 13:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಲವರು ಆ ದೇಹವನ್ನೂ ಮತ್ತು ಆ ದೇಹದ ಬಳಿ ನಿಂತಿದ್ದ ಸಿಂಹವನ್ನೂ ನೋಡಿದರು. ಆ ಜನರು ಪ್ರವಾದಿಯು ವಾಸಿಸುತ್ತಿದ್ದ ನಗರಕ್ಕೆ ಬಂದು, ಅವರು ರಸ್ತೆಯ ಮೇಲೆ ಕಂಡದ್ದನ್ನು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಾದುಹೋಗುವವರು ಶವವು ದಾರಿಯಲ್ಲಿ ಬಿದ್ದಿರುವುದನ್ನೂ, ಸಿಂಹವು ಅದರ ಬಳಿಯಲ್ಲಿ ನಿಂತಿರುವುದನ್ನೂ ಕಂಡು ವೃದ್ಧ ಪ್ರವಾದಿಯ ಊರಿಗೆ ಬಂದು ಅದನ್ನು ತಿಳಿಸಿದರು.
Kannada BSI Bible 2016
ಆಗ ಇಗೋ, ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ನೋಡಿ ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು;
Kannada BSI JV (ಕನ್ನಡ ಸತ್ಯವೇದವು J.V. (BSI))
ಹಾದುಹೋಗುವವರು ಶವವು ದಾರಿಯಲ್ಲಿ ಬಿದ್ದಿರುವದನ್ನೂ ಸಿಂಹವು ಅದರ ಬಳಿಯಲ್ಲಿ ನಿಂತಿರುವದನ್ನೂ ಕಂಡು ಮುದುಕನಾದ ಪ್ರವಾದಿಯ ಊರಿಗೆ ಬಂದು ಅದನ್ನು ತಿಳಿಸಿದರು.
Kannada Bible (KNCL) BSI 2016
ಹಾದುಹೋಗುವವರು ಆ ಶವವು ದಾರಿಯಲ್ಲಿ ಬಿದ್ದು ಇರುವುದನ್ನೂ ಸಿಂಹವು ಅದರ ಬಳಿಯಲ್ಲೆ ನಿಂತಿರುವುದನ್ನೂ ಕಂಡು ಮುದುಕ ಪ್ರವಾದಿಯ ಊರಿಗೆ ಬಂದು ಅದನ್ನು ತಿಳಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ, ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ಕಂಡು, ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು.