1 Kings 13:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇದಲ್ಲದೆ ದೇವಮನುಷ್ಯನು ಜನರಿಗೆ, “ಯೆಹೋವನು ಇದರ ಬಗ್ಗೆ ನನಗೆ ಹೇಳಿರುವ ಗುರುತೇನೆಂದರೆ, ‘ಯಜ್ಞವೇದಿಕೆಯು ಒಡೆದುಹೋಳಾಗುವುದು, ಬೂದಿಯು ನೆಲದ ಮೇಲೆ ಚೆಲ್ಲಿಹೋಗುವುದು” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವನು, “ನನ್ನ ಮಾತು ಯೆಹೋವನದು ಎಂಬುವುದಕ್ಕೆ ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಗುವುದೇ ಗುರುತಾಗಿರುವುದು” ಎಂದು ಹೇಳಿದನು.
Kannada BSI Bible 2016
ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ--ಕರ್ತನು ಇದಕ್ಕೆ ಹೇಳಿದ ಗುರುತೇ ನಂದರೆ--ಇಗೋ, ಬಲಿಪೀಠವು ಸೀಳಿಹೋಗಿ ಅದರ ಮೇಲೆ ಇರುವ ಬೂದಿಯು ಚೆಲ್ಲಲ್ಪಡುವದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವನು - ನನ್ನ ಮಾತು ಯೆಹೋವನದೆಂಬದಕ್ಕೆ ವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದು ಹೋಗುವದೇ ಗುರುತಾಗಿರುವದು ಎಂದು ಹೇಳಿದನು.
Kannada Bible (KNCL) BSI 2016
ಇದಲ್ಲದೆ, “ನನ್ನ ಮಾತು ಸರ್ವೇಶ್ವರನದು ಎಂಬುದಕ್ಕೆ ಈ ಪೀಠವು ಸೀಳಿ ಅದರ ಮೇಲಿನ ಬೂದಿ ಬಿದ್ದುಹೋಗುವುದೇ ಗುರುತಾಗಿರುವುದು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ, “ಯೆಹೋವ ದೇವರು ಇದಕ್ಕೆ ಹೇಳಿದ ಗುರುತೇನೆಂದರೆ, ಇಗೋ, ಬಲಿಪೀಠವು ಸೀಳಿಹೋಗಿ, ಅದರ ಮೇಲೆ ಇರುವ ಬೂದಿಯು ಬಿದ್ದುಹೋಗುವುದು,” ಎಂದನು.