1 Kings 13:31 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹೀಗೆ ಪ್ರವಾದಿಯು ಆ ದೇಹವನ್ನು ಸಮಾಧಿ ಮಾಡಿದನು. ನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ, ನನ್ನನ್ನು ಅದೇ ಸ್ಮಶಾನದಲ್ಲಿ ಸಮಾಧಿಮಾಡಿ. ಅವನ ಪಕ್ಕದಲ್ಲೇ ನನ್ನ ಮೂಳೆಗಳನ್ನೂ ಹಾಕಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ನನ್ನ ಶವವನ್ನು ದೇವರ ಮನುಷ್ಯನ ಶವವಿರುವಲ್ಲೇ ಸಮಾಧಿಮಾಡಿರಿ. ನನ್ನ ಎಲುಬುಗಳನ್ನು ಅವನ ಎಲುಬುಗಳು ಇರುವಲ್ಲೇ ಇಡಿರಿ.
Kannada BSI Bible 2016
ಅವನು ಇವನನ್ನು ಹೂಣಿಟ್ಟ ತರುವಾಯ ಏನಾಯಿತಂದರೆ, ಅವನು ತನ್ನ ಮಕ್ಕಳಿಗೆ--ನಾನು ಸತ್ತಾಗ ದೇವರ ಮನುಷ್ಯನನ್ನು ಹೂಣಿಟ್ಟ ಸಮಾಧಿ ಯಲ್ಲಿ ನನ್ನನ್ನು ಹೂಣಿಡಿರಿ; ನನ್ನ ಎಲುಬುಗಳನ್ನು ಅವನ ಎಲುಬುಗಳ ಬಳಿಯಲ್ಲಿ ಇಡಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಅವನು ತನ್ನ ಮಕ್ಕಳಿಗೆ - ನಾನು ಸತ್ತಾಗ ನನ್ನ ಶವವನ್ನು ದೇವರ ಮನುಷ್ಯನ ಶವವಿರುವಲ್ಲೇ ಸಮಾಧಿಮಾಡಿರಿ; ನನ್ನ ಎಲುಬುಗಳನ್ನು ಅವನ ಎಲುಬುಗಳಿರುವಲ್ಲೇ ಇಡಿರಿ.
Kannada Bible (KNCL) BSI 2016
ಅನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ನನ್ನ ಶವವನ್ನು ಆ ದೈವಭಕ್ತನ ಶವ ಇರುವಲ್ಲೇ ಸಮಾಧಿಮಾಡಿರಿ; ನನ್ನ ಎಲುಬುಗಳನ್ನು ಅವನ ಎಲುಬುಗಳಿರುವಲ್ಲೇ ಇಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ವೃದ್ಧ ಪ್ರವಾದಿಯು ಅವನನ್ನು ಹೂಳಿಟ್ಟ ತರುವಾಯ, ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ದೇವರ ಮನುಷ್ಯನನ್ನು ಹೂಳಿಟ್ಟ ಸಮಾಧಿಯಲ್ಲಿ ನನ್ನನ್ನು ಹೂಳಿಡಿರಿ. ನನ್ನ ಎಲುಬುಗಳನ್ನು ಅವನ ಎಲುಬುಗಳ ಬಳಿಯಲ್ಲಿ ಇಡಿರಿ.