1 Kings 14:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾರೊಬ್ಬಾಮನು ತನ್ನ ಪತ್ನಿಗೆ, “ಶೀಲೋವಿಗೆ ಹೋಗು. ಅಲ್ಲಿಗೆ ಹೋಗಿ ಪ್ರವಾದಿಯಾದ ಅಹೀಯನನ್ನು ನೋಡು. ನಾನು ಇಸ್ರೇಲಿನ ರಾಜನಾಗುವೆನೆಂದು ತಿಳಿಸಿದ ಮನುಷ್ಯನೇ ಅಹೀಯನು. ನೀನು ನನ್ನ ಪತ್ನಿಯೆಂದು ಜನರಿಗೆ ತಿಳಿಯದ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ, “ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷಹಾಕಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರಿಗೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ.
Kannada BSI Bible 2016
ಯಾರೊಬ್ಬಾಮನ ಪತ್ನಿ ಎಂದು ಯಾರೂ ತಿಳಿಯದ ಹಾಗೆ ವೇಷಹಾಕಿಕೊಂಡು ಶೀಲೋವಿಗೆ ಹೋಗು; ಇಗೋ--ಈ ಜನರ ಮೇಲೆ ನೀನು ಅರಸನಾಗಿರುವಿ ಎಂದು ನನಗೆ ಹೇಳಿದ ಪ್ರವಾದಿಯಾದ ಅಹೀಯನು ಅಲ್ಲಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ - ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷ ಮಾರ್ಪಡಿಸಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರ ಮೇಲೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ.
Kannada Bible (KNCL) BSI 2016
ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ, “ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷಮಾರ್ಪಡಿಸಿಕೊಂಡು ಶಿಲೋವಿಗೆ ಹೋಗು. ನಾನು ಈ ಜನರಿಗೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿ ಅಹೀಯನು ಅಲ್ಲಿರುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೀನು ಯಾರೊಬ್ಬಾಮನ ಪತ್ನಿ ಎಂದು ಯಾರೂ ತಿಳಿಯದ ಹಾಗೆ ನೀನೆದ್ದು, ವೇಷಹಾಕಿಕೊಂಡು ಶೀಲೋವಿಗೆ ಹೋಗು. ‘ಈ ಜನರ ಮೇಲೆ ಅರಸನಾಗಿರುವೆ,’ ಎಂದು ನನಗೆ ಹೇಳಿದ ಪ್ರವಾದಿ ಅಹೀಯನು ಅಲ್ಲಿದ್ದಾನೆ.